ಸ್ವಾಮಿ ಹೇಳಿಕೆಗೆ ವಿರೋಧ: ಸಂಸದರಿಂದ ಸಂಸತ್ ನಲ್ಲಿ ಗದ್ದಲ

ಮಸೀದಿ ಕುರಿತಂತೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ ಸಂಸತ್ ನಲ್ಲಿ ಮಂಗಳವಾರ ತೀವ್ರ ಗದ್ದಲ ಉಂಟು ಮಾಡಿತ್ತು...
ಸುಬ್ರಹ್ಮಣ್ಯನ್ ಸ್ವಾಮಿ  ಹೇಳಿಕೆ ವಿರೋಧಿಸಿ ಸಂಸತ್ ನಲ್ಲಿ ಗದ್ದಲ
ಸುಬ್ರಹ್ಮಣ್ಯನ್ ಸ್ವಾಮಿ ಹೇಳಿಕೆ ವಿರೋಧಿಸಿ ಸಂಸತ್ ನಲ್ಲಿ ಗದ್ದಲ
Updated on: 

ನವದೆಹಲಿ: ಮಸೀದಿ ಕುರಿತಂತೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ ಸಂಸತ್ ನಲ್ಲಿ ಮಂಗಳವಾರ ತೀವ್ರ ಗದ್ದಲ ಉಂಟು ಮಾಡಿತ್ತು.

ಗುವಾಹಟಿಯಲ್ಲಿ ಹಾಜರಿದ್ದ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು, ಮಸೀದಿ ಎಂಬುದು ಧಾರ್ಮಿಕ ಸ್ಥಳವಲ್ಲ, ಇದೊಂದು ಕಟ್ಟಡವಷ್ಟೇ. ಈ ಕಟ್ಟಡ ಯಾವಾಗ ಬೇಕಾದರು ಕೆಡವಬಹುದು. ನನ್ನ ಈ ಹೇಳಿಕೆಗೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ, ಚರ್ಚಿಸಲು ನಾನು ಸಿದ್ಧನಿದ್ದೇನೆ. ಏಕೆಂದರೆ ಈ ಮಾಹಿತಿ ನನಗೆ ಸೌದಿ ಅರೇಬಿಯಾದ ಜನರಿಂದಲೇ ತಿಳಿದುಬಂದಿದ್ದು ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು.

ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇಂದು ನಡೆದ ಸಂಸತ್ ಅಧಿವೇಶನದಲ್ಲೂ ಗದ್ದಲ ಉಂಟುಮಾಡಿತ್ತು. ಸಂಸತ್ ಅಧಿವೇಶನದ ವೇಳೆ ಕಾಂಗ್ರೆಸ್ ಪಕ್ಷದ ಸದಸ್ಯ ಪ್ರಮೋದ್ ತೆವಾರಿ ಅವರು, ಜ್ಯಾತ್ಯಾತೀತವೇ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಪ್ರಮುಖ ಬುನಾದಿ. ಅಂತಹ ರಾಷ್ಟ್ರದ ಜಾತಿ, ಧರ್ಮದ ವಿರುದ್ಧ ವಿರೋಧ ಮಾತುಗಳನ್ನು ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ಹೀಗಾಗಿ ಈ ಕುರಿತಂತೆ ಚರ್ಚೆಗೆ ಅನುಮತಿ ನೀಡುವಂತೆ ಉಪಾಧ್ಯಕ್ಷ ಪಿ ಜೆ ಕುರಿಯನ್ ಅವರ ಮುಂದೆ ಮನವಿ ಇಟ್ಟರು. ಈ ವೇಳೆ ಪ್ರಮೋದ್ ತೆವಾರಿ ಅವರ ಸಮಯಾವಧಿ ಮುಗಿದ ಕಾರಣ ಮತ್ತೆ ಮುಂದೆ ಅವಕಾಶ ಸಿಕ್ಕರೆ ಈ ಕುರಿತಂತೆ ಪುನಃ ಮನವಿ ಇಡಬಹುದು ಎಂದು ಕುರಿಯನ್ ಅವರು ಹೇಳಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಸಂಸತ್ ನಲ್ಲಿ ಘೋಷಣಾ ವಾಕ್ಯಗಳನ್ನು ಕೂಗುತ್ತಾ ಪ್ರತಿಭಟನೆಗಿಳಿದರು. ನಂತರ ಘೋಷಣೆ ಹಾಗೂ ಪ್ರತಿಭಟನೆ ನಿಲ್ಲಿಸಿ ತಮ್ಮ ತಮ್ಮ ಕುರ್ಚಿಗಳಿಗೆ ಹೋಗಿ ಕುಳಿತುಕೊಳ್ಳುವಂತೆ ಉಪಾಧ್ಯಕ್ಷ ಕುರಿಯನ್ ಅವರು ಮನವಿ ಮಾಡಿದರೂ ಕೇಳದ ಕಾಂಗ್ರೆಸ್ ನಾಯಕರು ಬಿಜೆಪಿಯ ಗುಂಡಾಗಿರಿಯನ್ನು ನಿಲ್ಲಿಸಿ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ತದನಂತರ ಮಾತನಾಡಿದ ಪಿ.ಜೆ.ಕುರಿಯನ್ ಈ ರೀತಿಯ ಕೂಗಾಟ ಹಾಗೂ ಘೋಷಣೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು. ನಂತರ 10 ನಿಮಿಷಗಳ ಕಾಲ ಅಧಿವೇಶನವನ್ನು ಮುಂದೂಡಲಾಯಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com