ಜಾಟ್ ಸಮುದಾಯ ಹಿಂದುಳಿದ ಸಮುದಾಯ ಅಲ್ಲ: ಸುಪ್ರೀಂಕೋರ್ಟ್

ಜಾಟ್ ಸಮುದಾಯಕ್ಕೆ ಇತರ ಹಿಂದುಳಿದ ವರ್ಗ (ಒಬಿಸಿ) ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರದ ತೀರ್ಮಾನ ಕುರಿತಂತೆ ಸುಪ್ರೀಂಕೋರ್ಟ್...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಜಾಟ್ ಸಮುದಾಯಕ್ಕೆ ಇತರ ಹಿಂದುಳಿದ ವರ್ಗ (ಒಬಿಸಿ) ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರದ ತೀರ್ಮಾನ ಕುರಿತಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾಟ್ ಸಮುದಾಯ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿಸಿತ್ತು. ತದನಂತರ ಆ ಸಮುದಾಯಕ್ಕೆ ಸರ್ಕಾರದಿಂದ ಎಲ್ಲಾ ಸವಲತ್ತುಗಳನ್ನು ನೀಡಲಾಗಿತ್ತು. ಯುಪಿಎ ಸರ್ಕಾರದ ಈ ನಿರ್ಧಾರವನ್ನೇ ಅಧಿಕಾರಕ್ಕೆ ಬಂದ ಮೋದಿ ಸರ್ಕಾರವೂ ಜಾಟ್ ಸಮುದಾಯವನ್ನು ಹಿಂದುಳಿದ ಪ್ರವರ್ಗಗಳಲ್ಲಿಯೇ ಮುಂದುವರೆಯುವಂತೆ ಮಾಡಿತ್ತು.

ಸರ್ಕಾರದ ಈ ತೀರ್ಮಾನವನ್ನು ವಿಚಾರೆಣೆಗೆ ಕೈಗೆತ್ತಿಕೊಂಡ ನ್ಯಾ.ರಂಜನ್ ಗಗೋಯ್ ಹಾಗೂ ನ್ಯಾ.ರಹಿನ್ ಟನ್ ಫಲಿ ನಾರಿಮನ್ ಅವರಿದ್ದ ಪೀಠ, ಜಾಟ್ ಸಮುದಾಯ ರಾಜಕೀಯವಾಗಿ ಸಂಘಟಿತವಾದುದು, ಇಂದಿಗೂ ಜಾಟ್ ಸಮುದಾಯ ಹಿಂದುಳಿದ ವರ್ಗವೆಂಬ ಕೇಂದ್ರದ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಈ ಹಿಂದೆ ಜಾಟ್ ಸಮುದಾಯ ಹಿಂದುಳಿದ ಸಮುದಾಯವಾಗಿತ್ತು. ಹಾಗಾಗಿಯೇ ಜಾಟ್ ಸಮುದಾಯಕ್ಕೆ ಹಿಂದುಳಿದ ವರ್ಗಕ್ಕೆ ಸೇರಿಸಲು ಅನುಮತಿ ನೀಡಲಾಗಿತ್ತು. ಆದರೆ ಇಂದು ಈ ಸಮುದಾಯವು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಪ್ರಬಲವಾಗಿ ಮುಂದುವರೆದಿದೆ. ಜಾಟ್ ಎಂಬ ಪ್ರಮುಖ ಅಂಶವನ್ನೇ ಇರಿಸಿಕೊಂಡು, ಇಂದಿಗೂ ಆ ವರ್ಗದವರು ಹಿಂದುಳಿದ್ದಾರೆ ಎಂದು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಜಾಟ್ ಸಮುದಾಯ ಕುರಿತಂತೆ ಕೇಂದ್ರ ಸರ್ಕಾರದ ನಿರ್ಧಾರದಲ್ಲಿ ತಪ್ಪಿದೆ ಎಂದು ಹೇಳಿದ್ದಾರೆ.

ಜಾಟ್ ಸಮುದಾಯದ ಬೆಳವಣಿಗಳ ಮೇಲೆ ಸುಪ್ರೀಂ ಕಣ್ಗಾವಲಿರಿಸಿದೆ. ಅವರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ದೇಶದಲ್ಲಿ ಪ್ರಬಲವಾಗಿದೆ. ಜಾಟ್ ಸಮುದಾಯವನ್ನು ಹಿಂದುಳಿದ ಪ್ರವರ್ಗಗಳಿಗೆ ಸೇರಿಸಿದರೆ ಇನ್ನಿತರೆ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಜಾಟ್ ಸಮುದಾಯವನ್ನು ಹಿಂದುಳಿತ ಪ್ರವರ್ಗಗಳಿಂದ ಕೈಬಿಡಬೇಕೆಂದು ಕೇಂದ್ರಕ್ಕೆ ಸುಪ್ರೀಂ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com