ಕಪ್ಪು ಹಣ: ಪರಿಣಾಮಕಾರಿ ಕಾನೂನು ಜಾರಿಗೆ ಕೇಂದ್ರದಿಂದ ಒಪ್ಪಿಗೆ

ವಿದೇಶದ ಬ್ಯಾಂಕ್ ಗಳಲ್ಲಿ ಇಟ್ಟಿರುವ ಕಪ್ಪುಹಣ ವಾಪಸ್ ತರುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಸಿಕ್ಕಿದ್ದು, ಪರಿಣಾಮಕಾರಿ ಕಾನೂನು ಜಾರಿಗೆ ಕೇಂದ್ರದಿಂದ ಬುಧವಾರ ಅಂಗೀಕಾರ ದೊರಕಿದೆ...
ಕಪ್ಪು ಹಣ: ಪರಿಣಾಮಕಾರಿ ಕಾನೂನು ಜಾರಿಗೆ ಕೇಂದ್ರದಿಂದ ಒಪ್ಪಿಗೆ

ನವದೆಹಲಿ: ವಿದೇಶದ ಬ್ಯಾಂಕ್ ಗಳಲ್ಲಿ ಇಟ್ಟಿರುವ ಕಪ್ಪುಹಣ ವಾಪಸ್ ತರುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಸಿಕ್ಕಿದ್ದು, ಪರಿಣಾಮಕಾರಿ ಕಾನೂನು ಜಾರಿಗೆ ಕೇಂದ್ರದಿಂದ ಬುಧವಾರ ಅಂಗೀಕಾರ ದೊರಕಿದೆ.

2015 ಕೇಂದ್ರ ಬಜೆಟ್ ಅಧಿವೇಶನದ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಪ್ಪುಹಣ ಕುರಿತಂತೆ ಪರಿಣಾಮಕಾರಿಯಾದ ಕಾನೂನೊಂದನ್ನು ಜಾರಿ ತರುತ್ತೇನೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಕೇಂದ್ರದ ಅಂಗೀಕಾರಕ್ಕಾಗಿ ಕಾದಿದ್ದರು. ಜೇಟ್ಲಿ ಅವರ ಮನವಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಒಪ್ಪಿಗೆ ನೀಡಿದೆ.

ಮಸೂದೆ ಅನುಷ್ಠಾನಕ್ಕೆ ಬಂದರೆ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ವಿದೇಶದಲ್ಲಿರುವ ಅಕ್ರಮ ಆಸ್ತಿ ಹಾಗೂ ಸಂಪತ್ತುಗಳ ವಾರಸುದಾರರ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತದೆ. ಮಸೂದೆ ಜಾರಿಯಾದರೆ ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿದ ಭಾರತೀಯರಿಗೆ 10 ವರ್ಷಗಳ ಕಠಿಣ ಜೈಲುವಾಸ ಅನುಭವಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com