ವಿದೇಶಿ ಆಸ್ತಿ ಬಹಿರಂಗಕ್ಕೆ ಸರ್ಕಾರದ ಕಾಲಾವಕಾಶ

ವಿದೇಶಗಳಲ್ಲಿ ಹಣ, ಆಸ್ತಿ-ಪಾಸ್ತಿ ಹೊಂದಿದ್ದೀರಾ? ಆದದ್ದು ಆಗಿಹೋಯಿತು ಬಿಡಿ. ಇನ್ನೂ ಕಾಲ ಮಿಂಚಿಲ್ಲ. ವಿದೇಶಗಳಲ್ಲಿ ನೀವಿಟ್ಟಿರುವ ಹಣ, ಆಸ್ತಿಗಳವಿವರವನ್ನು ಬಹಿರಂಗಪಡಿಸಿ, ದಂಡ ಪಾವತಿಸಿ. ಆಗ ಜೈಲು ಶಿಕ್ಷೆಗೆ ಒಳಗಾಗುವ ಅಪಾಯದಿಂದ ತಪ್ಪಿಸಿಕೊಳ್ಳಬಹುದು...
ಕ್ಯಾಬಿನೆಟ್ ಸಭೆ (ಸಾಂದರ್ಭಿಕ ಚಿತ್ರ)
ಕ್ಯಾಬಿನೆಟ್ ಸಭೆ (ಸಾಂದರ್ಭಿಕ ಚಿತ್ರ)

ನವದೆಹಲಿ: ವಿದೇಶಗಳಲ್ಲಿ ಹಣ, ಆಸ್ತಿ-ಪಾಸ್ತಿ ಹೊಂದಿದ್ದೀರಾ? ಆದದ್ದು ಆಗಿಹೋಯಿತು ಬಿಡಿ. ಇನ್ನೂ ಕಾಲ ಮಿಂಚಿಲ್ಲ. ವಿದೇಶಗಳಲ್ಲಿ ನೀವಿಟ್ಟಿರುವ ಹಣ, ಆಸ್ತಿಗಳವಿವರವನ್ನು ಬಹಿರಂಗಪಡಿಸಿ, ದಂಡ ಪಾವತಿಸಿ. ಆಗ ಜೈಲು ಶಿಕ್ಷೆಗೆ ಒಳಗಾಗುವ ಅಪಾಯದಿಂದ ತಪ್ಪಿಸಿಕೊಳ್ಳಬಹುದು.

ಹೀಗೆಂದು ಕಪ್ಪುಹಣ ಕಾನೂನೇ ಹೇಳುತ್ತದೆ. ವಿದೇಶಗಳಲ್ಲಿ ಆಸ್ತಿ ಹೊಂದಿರುವವರಿಗೆ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಲು ಕೆಲವು ತಿಂಗಳ ಕಾಲಾವಕಾಶವನ್ನು ಸರ್ಕಾರ ನೀಡಿದೆ. ಅಷ್ಟರೊಳಗೆ ಎಲ್ಲ ಆಸ್ತಿ ಬಹಿರಂಗಪಡಿಸಿ, ತೆರಿಗೆ ತಪ್ಪಿಸಿದ್ದಕ್ಕೆ ದಂಡ ಪಾವತಿಸುವಂತೆಯೂ ಹೇಳಿದೆ. ಮಂಗಳವಾರ ರಾತ್ರಿ ಕೇಂದ್ರ ಸಂಪುಟ ಬಹಿರಂಗವಾಗದ ವಿದೇಶಿ ಆದಾಯ ಮತ್ತು ಆಸ್ತಿ(ಹೊಸ ತೆರಿಗೆ ವಿಧಿಸುವ) ವಿಧೇಯಕವನ್ನು ಅಂಗೀಕರಿಸಿದೆ.

ವಿದೇಶದಲ್ಲಿರುವ ಅಕ್ರಮ ಆಸ್ತಿ ಮತ್ತು ಕಪ್ಪುಹಣವನ್ನು ಪತ್ತೆಹಚ್ಚುವುದೇ ಇದರ ಉದ್ದೇಶ. ಜತೆಗೆ, ಈ ಕಾನೂನಿನ್ವಯ ತಪ್ಪಿತಸ್ಥರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಅವಕಾಶವಿದೆ. ಜತೆಗೆ, ಅಕ್ರಮ ಆಸ್ತಿಯ ಮೊತ್ತದ ಶೇ.300ರಷ್ಟು ದಂಡವನ್ನೂ ವಿಧಿಸಲಾಗುತ್ತದೆ. ಸಂಸತ್ ನಲ್ಲಿ ವಿಧೇಯಕ ಅಂಗೀಕಾರವಾದ ಬಳಿಕವೇ ಆಸ್ತಿ ವಿವರ ಬಹಿರಂಗಕ್ಕಿರುವ ಕಾಲಾವಧಿಯನ್ನು ಘೋಷಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com