ಕಲ್ಲಿದ್ದಲು ಹಗರಣ: ಸಿಬಿಐನಿಂದ 39ನೇ ಪ್ರಕರಣ ದಾಖಲು

ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ವಂಚನೆ ಮತ್ತು ಭ್ರಷ್ಟಚಾರ ಪ್ರಕರಣಕ್ಕೆ ಸಂಬಂಧ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ(ಕೆಪಿಸಿಎಲ್‌)...
ಕಲ್ಲಿದ್ದಲು ಹಗರಣ
ಕಲ್ಲಿದ್ದಲು ಹಗರಣ

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ವಂಚನೆ ಮತ್ತು ಭ್ರಷ್ಟಚಾರ ಪ್ರಕರಣಕ್ಕೆ ಸಂಬಂಧ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ(ಕೆಪಿಸಿಎಲ್‌) ಹಾಗೂ ಇತರ ಅಪರಿಚಿತ ಅಧಿಕಾರಿಗಳ ವಿರುದ್ಧ ಸಿಬಿಐ ಹೊಸ ‍ಪ್ರಕರಣವೊಂದನ್ನು ದಾಖಲಿಸಿದೆ.

ಖಾಸಗಿ ಭಾಗೀದಾರರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಜಂಟಿ ಸಹಭಾಗಿತ್ವದ ನಿಯಮಾವಳಿಗಳನ್ನು ನಿರ್ಲಕ್ಷಿಸಿದ ಆರೋಪ ಕೆಪಿಸಿಎಲ್‌ ಮೇಲಿದೆ.

2003ರಲ್ಲಿ ಎನ್‌ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ಕೆಪಿಸಿಎಲ್‌ಗೆ ಕಿಲೋನಿ, ಮನೋರಾ ದೀಪ್‌ನಲ್ಲಿ ತಲಾ ಒಂದು ಹಾಗೂ  ಬರಾಂಜ್‌ನಲ್ಲಿ ನಾಲ್ಕು ಸೇರಿದಂತೆ  ಒಟ್ಟು ಆರು ನಿಕ್ಷೇಪಗಳನ್ನು ಹಂಚಿಕೆ ಮಾಡಲಾಗಿತ್ತು.

ಪ್ರಕರಣ ಸಂಬಂಧ ಅಧಿಕಾರಿಗಳು,  ಬೆಂಗಳೂರು, ನವದೆಹಲಿ, ಕೋಲ್ಕತ್ತ  ಹಾಗೂ ನಾಗಪುರ ನಗರಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಕಲ್ಲಿದ್ದಲು ಹಗರಣ ಸಂಬಂಧ ದಾಖಲಿಸಲಾದ 39ನೇ ಪ್ರಕರಣ ಇದಾಗಿದ್ದು, ಕೆಪಿಸಿಎಲ್ ಅಧಿಕಾರಿಗಳಲ್ಲದೇ,   ಕೆಲ ಕಂಪೆನಿಗಳನ್ನು ಆರೋಪಿಗಳಾಗಿ ಪ್ರಕರಣದಲ್ಲಿ ನಮೂದಿಸಲಾಗಿದೆ  ಎಂದು ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com