ಅಡ್ಡಿ ನಿವಾರಣೆ

ಎರಡು ಪ್ರಮುಖ ಸುಧಾರಣಾ ವಿಧೇಯಕಗಳಿಗೆ ರಾಜ್ಯ ಸಭೆಯಲ್ಲಿದ್ದ ಅಡ್ಡಿ ನಿವಾರಣೆಯಾಗಿದೆ...
ಕಲ್ಲಿದ್ದಲು ಗಣಿಗಾರಿಕೆ (ಸಂಗ್ರಹ ಚಿತ್ರ)
ಕಲ್ಲಿದ್ದಲು ಗಣಿಗಾರಿಕೆ (ಸಂಗ್ರಹ ಚಿತ್ರ)
Updated on

ನವದೆಹಲಿ: ಎರಡು ಪ್ರಮುಖ ಸುಧಾರಣಾ ವಿಧೇಯಕಗಳಿಗೆ ರಾಜ್ಯ ಸಭೆಯಲ್ಲಿದ್ದ ಅಡ್ಡಿ ನಿವಾರಣೆಯಾಗಿದೆ.

ಕಲ್ಲಿದ್ದಲು ಗಣಿ(ವಿಶೇಷ ನಿಬಂಧನೆ) ವಿಧೇಯಕದಲ್ಲಿ ಯಾವುದೇ ಬದಲಾವಣೆ ತರದೇ ಅಂಗೀಕಾರ ಮಾಡಬಹುದು ಎಂದು ಪರಿಶೀಲನಾ ಸಮಿತಿ ಅಭಿಪ್ರಾಯ ಪಟ್ಟಿದೆ. ಆದರೆ, ಗಣಿಗಾರಿಕೆ ಮತ್ತು ಖನಿಜ ಗಳು(ಅಬಿsವೃದಿಟಛಿ ಮತ್ತು ನಿಬಂಧನೆ) ವಿಧೇಯಕದಲ್ಲಿ ಒಂದು ತಿದ್ದುಪಡಿ ತರುವಂತೆ ಸಮಿತಿ ಸೂಚಿಸಿದೆ. ಹೀಗಾಗಿ ಇದನ್ನು ಮತ್ತೊಮ್ಮೆ ಲೋಕಸಭೆಯ ಅಂಗೀಕಾರಕ್ಕೆ ಕಳುಹಿಸುವ ಸಾಧ್ಯತೆಯಿದೆ.

ರಾಜ್ಯಸಭೆಯಲ್ಲಿ ಬುಧವಾರ ಎರಡೂ ವಿಧೇಯಕಗಳಿಗೆ ಸಂಬಂಧಿಸಿದ ಪರಿಶೀ ಲನಾ ಸಮಿತಿ ವರದಿ ನೀಡಿದವು. ಆದರೆ ಸಮಿತಿ ಶಿಫಾರಸನ್ನು ಒಪ್ಪದ ಕಾಂಗ್ರೆಸ್, ಸಿಪಿಎಂ ಹಾಗೂ ಡಿಎಂಕೆ ಸದನದಲ್ಲಿ ಭಾರಿ ಗದ್ದಲ ಎಬ್ಬಿಸಿದವು. ಇದೇ ವೇಳೆ, ಟಿಎಂಸಿ, ಎಸ್ಪಿ, ಬಿಜೆಡಿ, ಎಐಎಡಿಎಂಕೆ ಸೇರಿದಂತೆ ಕೆಲವು ಪಕ್ಷಗಳು ವಿಧೇಯಕಗಳನ್ನು ವಿರೋಧಿಸದ ಕಾರಣ ರಾಜ್ಯಸಭೆಯಲ್ಲೂ ಇವು ಅಂಗೀಕಾರ ಪಡೆಯಬಹುದು.

ವಿಸ್ತರಣೆಗೆ ಚಿಂತನೆ
ಅಗತ್ಯವಿದ್ದರೆ ಬಜೆಟ್ ಅಧಿವೇಶನದ ಮೊದಲಾರ್ಧವನ್ನು 2 ದಿನ ವಿಸ್ತರಿಸಲು ಕೇಂದ್ರ ಚಿಂತನೆ ನಡೆಸಿದೆ. ಪ್ರಮುಖ ಸುಧಾರಣಾ ವಿಧೇಯಕಗಳಿಗೆ ಅಂಗೀಕಾರ ಪಡೆಯುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಾಡಿಗೆ ತಾಯಿ ನಿಯಮ ಬಿಗಿ
ಬಾಡಿಗೆ ತಾಯಿಗಾಗಿ ಭಾರತಕ್ಕೆ ಬರುವ ವಿದೇಶಿಯರಿಗೆ ಸಂಬಂಧಿಸಿದ ನಿಯಮಗಳನ್ನು ಸರ್ಕಾರ ಬಿಗಿಗೊಳಿಸಿದೆ. ವಿವಾಹವಾಗಿ 2 ವರ್ಷ ಕಳೆದಿರುವ ವಿದೇಶೀಯರಿಗೆ ಮಾತ್ರ ಬಾಡಿಗೆ ತಾಯಿ ಪಡೆಯುವ ಅವಕಾಶ, ವೈದ್ಯಕೀಯ ವೀಸಾ ಮೂಲಕವಷ್ಟೇ ಅಂಥವರು ಭಾರತಕ್ಕೆ ಬರಬೇಕು ಎಂಬಿತ್ಯಾದಿ ನಿಯಮಗಳನ್ನು ಜಾರಿ ಮಾಡಲಾಗಿದೆ. ಬಾಡಿಗೆ ತಾಯಿಗೆ ವಂಚನೆ ಆಗಬಾರದು ಎಂದು ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.

ಹಕ್ಕುಚ್ಯುತಿ ನಿರ್ಣಯ ಮಂಡನೆ ಎಚ್ಚರಿಕೆ
ಬೆಲೆ ಗಣನೀಯ ಪ್ರಮಾಣದಲ್ಲಿ ತಗ್ಗಿರುವುದರಿಂದ ಕೇರಳದ ರಬ್ಬರ್ ಬೆಳೆಗಾರರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಕೇರಳ ಸಂಸದರೊಂದಿಗೆ ತುರ್ತು ಸಭೆ ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರೂ, ಆ ನಿಟ್ಟಿನಲ್ಲಿ ಇನ್ನೂ ಹೆಜ್ಜೆ ಇಟ್ಟಿಲ್ಲ. ಹೀಗಾಗಿ ನಾವು ಸರ್ಕಾರದ ವಿರುದಟಛಿ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದ್ದಾರೆ. ಜತೆಗೆ, ಸರ್ಕಾರ ಒಂದೋ ರಬ್ಬರ್ ಆಮದಿಗೆ ನಿರ್ಬಂಧ ಹೇರಬೇಕು ಅಥವಾ ಆಮದು ಶುಲ್ಕ ಹೆಚ್ಚಿಸಬೇಕು ಎಂದೂ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com