ರಾಯಲ್ ಸೊಸೈಟಿಗೆ ರಾಮಕೃಷ್ಣನ್ ಅಧ್ಯಕ್ಷ

ಯುನೈಟೆಡ್ ಕಿಂಗ್ ಡಮ್ ನಲ್ಲಿರುವ ಪ್ರತಿಷ್ಠಿತ ರಾಯಲ್ ಸೊಸೈಟಿಗೆ ಭಾರತೀಯ ಮೂಲದ ವಿಜ್ಞಾನಿ ಡಾ. ವೆಂಕಟ ರಾಮನ್ ರಾಮಕೃಷ್ಣನ್ ಅಧ್ಯಕ್ಷರಾಗಲಿದ್ದಾರೆ...
ಭಾರತೀಯ ಮೂಲದ ವಿಜ್ಞಾನಿ ಡಾ. ವೆಂಕಟ ರಾಮನ್ ರಾಮಕೃಷ್ಣನ್
ಭಾರತೀಯ ಮೂಲದ ವಿಜ್ಞಾನಿ ಡಾ. ವೆಂಕಟ ರಾಮನ್ ರಾಮಕೃಷ್ಣನ್

ಲಂಡನ್: ಯುನೈಟೆಡ್ ಕಿಂಗ್ ಡಮ್ ನಲ್ಲಿರುವ ಪ್ರತಿಷ್ಠಿತ ರಾಯಲ್ ಸೊಸೈಟಿಗೆ ಭಾರತೀಯ ಮೂಲದ ವಿಜ್ಞಾನಿ ಡಾ. ವೆಂಕಟ ರಾಮನ್ ರಾಮಕೃಷ್ಣನ್ ಅಧ್ಯಕ್ಷರಾಗಲಿದ್ದಾರೆ.

2009ರಲ್ಲಿ ರಸಾಯನ ಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದ ಅವರು, ಹಾಲಿ ಅಧ್ಯಕ್ಷ ಸರ್ ಪೌಲ್ ನರ್ಸ್‍ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬುಧವಾರ ನಡೆದಿದ್ದ ಸೊಸೈಟಿಯ ಸದಸ್ಯರ ಸಭೆ ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಮಕೃಷ್ಣನ್ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವ ನಿರ್ಧಾರದ ಬಗ್ಗೆ
ಕೃತಜ್ಞನಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಮೂಲದ ವ್ಯಕ್ತಿಯೊಬ್ಬರು ಇಂಥ ಹುದ್ದೆಗೆ ಆಯ್ಕೆಯಾಗುತ್ತಿರುವುದು ಇದೇ ಮೊದಲು. 2003ರಲ್ಲಿ ಅವರಿಗೆ ಮೊದಲ ಬಾರಿಗೆ ಸೊಸೈಟಿಯ ಸದಸ್ಯತ್ವ ನೀಡಲಾಗಿತ್ತು.

ಏನಿದು ರಾಯಲ್ ಸೊಸೈಟಿ?:
ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಹಳೆಯ ಸಂಸ್ಥೆ ಇದು. 1660ರ ನವೆಂಬರ್‍ನಲ್ಲಿ ಸ್ಥಾಪನೆಯಾದ ಈ ಸಂಸ್ಥೆ ವಿಜ್ಞಾನ ಕ್ಷೇತ್ರದಲ್ಲಿ ಅಗ್ರ ಸಂಶೋಧನೆಗಳನ್ನು ಕೈಗೊಂಡವರು ಒಂಡೆಡೆ ಸೇರಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com