ಭಯೋತ್ಪಾಕರ ಹತ್ಯೆ, ಶೋಧ ಕಾರ್ಯ ಪ್ರಗತಿಯಲ್ಲಿದೆ: ಪರಿಕ್ಕರ್

ಜಮ್ಮುವಿನ ಸಾಂಬಾ ಸೆಕ್ಟರ್ ನಲ್ಲಿ ಉಗ್ರರು ನಡೆಸಿದ್ದ ದಾಳಿ ಪ್ರಕರಣ ಅಂತಿಮ ಹಂತದಲ್ಲಿದ್ದು, ದಾಳಿ ಮಾಡಿದ್ದಾರೆನ್ನಲಾದ ಇಬ್ಬರು ಉಗ್ರರನ್ನು..
ಭದ್ರತಾಪಡೆಗಳು (ಸಂಗ್ರಹ ಚಿತ್ರ)
ಭದ್ರತಾಪಡೆಗಳು (ಸಂಗ್ರಹ ಚಿತ್ರ)

ನವದೆಹಲಿ: ಜಮ್ಮುವಿನ ಸಾಂಬಾ ಸೆಕ್ಟರ್ ನಲ್ಲಿ ಉಗ್ರರು ನಡೆಸಿದ್ದ ದಾಳಿ ಪ್ರಕರಣ ಅಂತಿಮ ಹಂತದಲ್ಲಿದ್ದು, ದಾಳಿ ಮಾಡಿದ್ದಾರೆನ್ನಲಾದ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಇಂದು ಬೆಳಗ್ಗೆ ಸುಮಾರು 5.50 ಸುಮಾರಿನಲ್ಲಿ ಜಮ್ಮುವಿನ ಪಠಾಣ ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ 81ನೇ ಆರ್ಮಿ ರೆಜಿಮೆಂಟ್ ಕ್ಯಾಂಪ್ ಗೆ ಇಬ್ಬರು ಶಸ್ತ್ರ ಸಜ್ಜಿತ ಉಗ್ರರು ನುಸುಳಿದ್ದು, ಭದ್ರತಾ ಪಡೆಗಳ ಮೇಲೆ ಗುಂಡಿನ ಮಳೆಗರೆದಿದ್ದರು. ಇನ್ನು ಉಗ್ರರ ದಾಳಿಗೆ ಭದ್ರತಾ ಪಡೆಗಳು ದಿಟ್ಟ ಉತ್ತರ ನೀಡಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಉಗ್ರರ ದಾಳಿ ವೇಳೆ ಓರ್ವ ನಾಗರೀಕ ಕೂಡ ಗಾಯಗೊಂಡಿದ್ದು, ವೈಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗೆ ಗುಂಡೇಟು ತಗುಲಿದೆ ಎಂದು ತಿಳಿದುಬಂದಿದೆ. ಕೂಡಲೇ ಆತನನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ದೌಡಾಯಿಸಿದ್ದ ಹಿರಿಯ ಭದ್ರತಾ ಆಧಿಕಾರಿಗಳು, ಮತ್ತಷ್ಟು ಭದ್ರತಾ ಪಡೆಗಳನ್ನು ಕಾರ್ಯಾಚರಣೆಗೆ ನಿಯೋಜಿಸುವ ಮೂಲಕ ಭಾರಿ ವಿಧ್ವಂಸ ಸೃಷ್ಟಿಸ ಬೇಕೆಂಬ ಉಗ್ರರ ಉಪಾಯವನ್ನು ಬುಡಮೇಲು ಮಾಡಿದರು. ಘಟನೆ ಕುರಿತಂತೆ ಮಾತನಾಡಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಪ್ರಸ್ತುತ ಮತ್ತಷ್ಟು ಉಗ್ರರು ಅವಿತಿದ್ದಾರೆಯೇ ಎಂಬ ಅನುಮಾನದ ಮೇರೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಲ್ಲದೆ ಇತ್ತೀಚೆಗಿನ ಉಗ್ರರ ದಾಳಿ ಕುರಿತು ಮಾಹಿತಿ ನೀಡಿದ ಅವರು, ಈ ವರ್ಷ ಭದ್ರತಾ ಪಡೆಗಳ ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ 24ರಿಂದ 26 ಉಗ್ರರನ್ನು ಹತ್ಯೆಗಯ್ಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com