ಜಮ್ಮುವಿನಲ್ಲಿ ಮತ್ತೆ ಉಗ್ರರ ದಾಳಿ: ಓರ್ವ ಉಗ್ರನ ಹತ್ಯೆ, ಮುಂದುವರೆದ ಕಾರ್ಯಾಚರಣೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರಿನಲ್ಲಿರುವ ಭಾರತೀಯ ಕ್ಯಾಂಪ್ ಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ...
ಕಾರ್ಯಾಚರಣೆ ನಿರತ ಭದ್ರತಾ ಸಿಬ್ಬಂದಿ (ಸಂಗ್ರಹ ಚಿತ್ರ)
ಕಾರ್ಯಾಚರಣೆ ನಿರತ ಭದ್ರತಾ ಸಿಬ್ಬಂದಿ (ಸಂಗ್ರಹ ಚಿತ್ರ)

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ಮುಂದುವರೆದಿದ್ದು, ಶನಿವಾರ ಸಾಂಬಾ ಸೆಕ್ಟರಿನಲ್ಲಿರುವ ಭಾರತೀಯ ಕ್ಯಾಂಪ್ ಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

ಇಂದು ಬೆಳಗ್ಗೆ ಸುಮಾರು 5.50 ಸುಮಾರಿನಲ್ಲಿ ಜಮ್ಮುವಿನ ಪಠಾಣ ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ 81ನೇ ಆರ್ಮಿ ರೆಜಿಮೆಂಟ್ ಕ್ಯಾಂಪ್ ಗೆ ಇಬ್ಬರು ಶಸ್ತ್ರ ಸಜ್ಜಿತ ಉಗ್ರು ನುಸುಳಿದ್ದು, ಭದ್ರತಾ ಪಡೆಗಳ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಇನ್ನು ಉಗ್ರರ ದಾಳಿಗೆ ಭದ್ರತಾ ಪಡೆಗಳು ದಿಟ್ಟ ಉತ್ತರ ನೀಡಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೋರ್ವ ಉಗ್ರನಿಗಾಗಿ ಕಾರ್ಯಾಚಾರಣೆ ಮುಂದುವರೆದಿದ್ದು, ನಾರೂರು ಭದ್ರತಾ ಪಡೆಯ ಸಿಬ್ಬಂದಿಗಳು ಸೇನಾ ಕ್ಯಾಂಪ್ ಅನ್ನು ಸುತ್ತುವರೆದಿದ್ದಾರೆ.

ಇನ್ನು ಉಗ್ರರ ದಾಳಿ ವೇಳೆ ಓರ್ವ ನಾಗರೀಕ ಕೂಡ ಗಾಯಗೊಂಡಿದ್ದು, ವೈಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗೆ ಗುಂಡೇಟು ತಗುಲಿದೆ ಎಂದು ತಿಳಿದುಬಂದಿದೆ. ಕೂಡಲೇ ಆತನನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಭದ್ರತಾ ಆಧಿಕಾರಿಗಳು ದೌಡಾಯಿಸಿದ್ದು, ಮತ್ತಷ್ಟು ಭದ್ರತಾ ಪಡೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಲು ಸೂಚನೆ ನೀಡಲಾಗಿದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆಯಷ್ಟೇ ಕಟುವಾ ಜಿಲ್ಲೆಯ ರಾಜ್ ಭಾಗ್ ಪೊಲೀಸ್ ಠಾಣೆ ಮೇಲೆ ಸುಮಾರು 3-4 ಉಗ್ರರ ಗುಂಪು ದಾಳಿ ಮಾಡಿದ್ದರು. ಈ ವೇಳೆ ಇಬ್ಬರು ಉಗ್ರರು ಹತರಾಗಿದಲ್ಲದೇ, ಸ್ಥಳೀಯ. ಓರ್ವ ನಾಗರೀಕ ಕೂಡ ಮೃತಪಟ್ಟಿದ್ದನು. ಕಾರ್ಯಾಚರಣೆ ವೇಳೆ  ಉಗ್ರರು ಇಬ್ಬರು ಪೊಲೀಸರನ್ನು ಹತ್ಯೆಗೈದಿದ್ದು, ಪೊಲೀಸ್ ಠಾಣೆಯಲ್ಲಿರುವ ಪೊಲೀಸರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಈ ಘಟನೆ ನಡೆದ ಕೇವಲ 24 ಗಂಟೆಯೋಳಗೇ ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com