ಐಎಎಸ್‌,ಐಪಿಎಸ್‌ ಬಡ್ತಿ ವಯೋಮಿತಿ 56ಕ್ಕೆ ಏರಿಕೆ: ಪ್ರಸಕ್ತ ಸಾಲಿನಿಂದ ಜಾರಿ

ಅಖಿಲ ಭಾರತ ಸೇವೆಗಳಾದ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ಗಳಿಗೆ ರಾಜ್ಯ ವೃಂದದ ಅಧಿಕಾರಿಗಳ ಬಡ್ತಿಯ ವಯೋಮಿತಿಯನ್ನು 54ರಿಂದ...
ಐಎಎಸ್‌,ಐಪಿಎಸ್‌ ಬಡ್ತಿ ವಯೋಮಿತಿ 56ಕ್ಕೆ ಏರಿಕೆ: ಪ್ರಸಕ್ತ ಸಾಲಿನಿಂದ ಜಾರಿ

ನವದೆಹಲಿ: ಅಖಿಲ ಭಾರತ ಸೇವೆಗಳಾದ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ಗಳಿಗೆ ರಾಜ್ಯ ವೃಂದದ ಅಧಿಕಾರಿಗಳ ಬಡ್ತಿಯ ವಯೋಮಿತಿಯನ್ನು 54ರಿಂದ 56ಕ್ಕೆ ಏರಿಸಲಾಗಿದ್ದು, ಪ್ರಸಕ್ತ ವರ್ಷದಿಂದ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಮತ್ತು ಭಾರತೀಯ ಅರಣ್ಯ ಸೇವೆಗಳಿಗೆ (ಐಎಫ್‌ಎಸ್‌) ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಸಂಬಂಧ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ.

ಹೊಸ ನಿಯಮದ ಪ್ರಕಾರ, ರಾಜ್ಯ ಸೇವೆಗಳಿಂದ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ವಿಭಾಗಗಳ ಆಯ್ಕೆಯ ಜವಾಬ್ದಾರಿ ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ಸಮಿತಿಯದ್ದಾಗಿರಲಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com