ಜಬಲ್ಪುರ: ಇಲ್ಲಿನ ಚರ್ಚ್ ಹಾಗೂ ಕ್ಯಾತೊಲಿಕ್ ಸ್ಕೂಲ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಆರು ಆರೋಪಿಗಳನ್ನು ಸೋಮವಾರ ಬೆಳಗ್ಗೆ ಬಂಧಿಸಿದ್ದಾರೆ.
ಚರ್ಚ್ ಹಾಗೂ ಕ್ಯಾತೊಲಿಕ್ ಸ್ಕೂಲ್ ದಾಳಿ ಪ್ರಕರಣ ಸಂಬಂಧ ನಾವು ಆರು ಮಂದಿಯನ್ನು ಬಂಧಿಸಿದ್ದೇವೆ ಎಂದು ಜಬಲ್ಪುರ ಹೆಚ್ಚು ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬಂಧಿತರನ್ನು ಧರ್ಮ ಸೇನಾ ನಾಯಕ ಯೇಗೇಶ್ ಅಗರವಾಲ್ ಹಾಗೂ ಆತನ ಸಹಚರರಾದ, ನಿತಿನ್ ರಜಾಕ್, ಪ್ರತೀಕ್ ಪ್ಯಾಸಿ, ಅನುರಾಗ್ ಚೌಕಾಸಿ, ಅಭಿಶೇಕ್ ಚೌಕಾಸಿ ಮತ್ತು ಶರದ್ ರಾವ್ ಎಂದು ಗುರಿತಸಲಾಗಿದೆ.
ಈ ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಸೆನ್ 147, 148, 149, 294, ಮತ್ತು 323ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ. ಮಾರ್ಚ್ 20ರಂದು ಚರ್ಚ್ ಹಾಗೂ ಶಾಲೆಯ ಮೇಲೆ ದಾಳಿಯು ನಡೆದಿತ್ತಾದರೂ ಇಲ್ಲಿಯವರೆಗೂ ಯಾರನ್ನು ಬಂಧಿಸಿರಲಿಲ್ಲ.
Advertisement