ಹಂದಿ ಜ್ವರಕ್ಕೆ ರಾಜಸ್ತಾನದಲ್ಲಿ ಮತ್ತೆರಡು ಬಲಿ, ಸಾವಿನ ಸಂಖ್ಯೆ 402ಕ್ಕೆ ಏರಿಕೆ

ಮಹಾಮಾರಿ ಹಂದಿ ಜ್ವರ ದೇಶದಾದ್ಯಂತ ಕಾಡುತ್ತಿದ್ದು, ರಾಜಸ್ತಾನದಲ್ಲಿ ಮತ್ತಿಬ್ಬರನ್ನು ಬಲಿ ತೆಗೆದುಕೊಂಡಿದೆ. ಇದರಂತೆ ರಾಜಸ್ತಾನ ಒಂದರಲ್ಲೇ ಸಾವಿನ ಸಂಖ್ಯೆ 402ಕ್ಕೆ ಏರಿದೆ...
ಎಚ್1ಎನ್1ಗೆ ಮತ್ತೆರಡು ಬಲಿ
ಎಚ್1ಎನ್1ಗೆ ಮತ್ತೆರಡು ಬಲಿ

ಜೈಪುರ: ಮಹಾಮಾರಿ ಹಂದಿ ಜ್ವರ ದೇಶದಾದ್ಯಂತ ಕಾಡುತ್ತಿದ್ದು, ರಾಜಸ್ತಾನದಲ್ಲಿ ಮತ್ತಿಬ್ಬರನ್ನು ಬಲಿ ತೆಗೆದುಕೊಂಡಿದೆ. ಇದರಂತೆ ರಾಜಸ್ತಾನ ಒಂದರಲ್ಲೇ ಸಾವಿನ ಸಂಖ್ಯೆ 402ಕ್ಕೆ ಏರಿದೆ.

ಸರ್ಕಾರದ ಅಂಕಿ ಅಂಶ ಪ್ರಕಾರ ಎಚ್1ಎನ್1ಗೆ ಬಲಿಯಾದವರ ಸಂಖ್ಯೆ ರಾಜಸ್ತಾನ ಒಂದರಲ್ಲೇ 402ಕ್ಕೆ ಏರಿದೆ. ಸುಮಾರು 6,432 ಮಂದಿಯಲ್ಲಿ ಹೆಚ್1ಎನ್1 ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಜೈಪುರ ಒಂದರಲ್ಲೇ 79, ಅಜ್ಮೇರ್ 43, ಜೋದ್ಪುರ 33, ನಾಗ್ಪುರ 30, ಬರ್ಮೇರ್ 23, ಕೋಟಾ 18, ಉದಯ್ ಪುರ 15, ಚಿತ್ತೂರ್ಘಢ್ 14, ಸಿಕರ್ ಮತ್ತು ಪಲಿ 12, ಟೋಂಕ್ ಮತ್ತು ಬಿಲ್ವಾರ 11, ಬಿಕಾನೇರ್ 9, ಸೇರಿದಂತೆ ಚುರು 9, ಭರತ್ ಪುರ 6, ಬನ್ಸ್ ವಾರ 6 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ರೋಗತಡೆಗೆ ಆರೋಗ್ಯ ಇಲಾಖೆ ಎಷ್ಟೇ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳುತ್ತಿದ್ದರೂ, ಮಹಾಮಾರಿ ಹೆಚ್1ಎನ್1 ಮಾತ್ರ ನಿಯಂತ್ರಣಕ್ಕೆ ಬಾರದೆ, ದೇಶದಾದ್ಯಂತ ತನ್ನ ಮರಣ ಮೃದಂಗವನ್ನು ಬಾರಿಸುತ್ತಲೇ ಸಾಗತೊಡಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com