
ನವದೆಹಲಿ: ಸಿಂಗಾಪುರದ ಮೊದಲ ಪ್ರಧಾನಿ ಲೀ ಕ್ವಾನ್ ಹ್ಯೂ ಅವರ ಅಂತ್ಯ ಕ್ರಿಯೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. 91 ವರ್ಷದ ಲೀ ಸೋಮವಾರ ಅಸುನೀಗಿದ್ದರು.
29ರಂದು ಲೀ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಮೋದಿ ಸಿಂಗಾಪುರಕ್ಕೆ ತೆರಳಿ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ. `ದೂರದೃಷ್ಟಿಯ ರಾಜನೀತಿಜ್ಞ ಲೀ ಅವರ ಜೀವನ ಎಲ್ಲರಿಗೂ ಒಂದು ಪಾಠವಿದ್ದಂತೆ. ಅವರ ಮರಣ ವಾರ್ತೆ ಬಹು ಬೇಸರ ತಂದಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಲೀ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ಹಾಗೂ ಸಿಂಗಾಪುರದ ಜನತೆಗೆ ಸ್ಥೈರ್ಯ ನೀಡುವಂತೆ ಪ್ರಾರ್ಥಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.
Advertisement