ಜರ್ಮನ್‌ವಿಂಗ್ಸ್‌ ವಿಮಾನ ದುರಂತ: ಕಾಕ್‌ಪಿಟ್‌ ಬಾಗಿಲು ಒಡೆಯಲು ಮುಂದಾಗಿದ್ದ ಪೈಲಟ್‌..!

ದಕ್ಷಿಣ ಫ್ರಾನ್ಸ್ ನಲ್ಲಿ ದುರಂತಕ್ಕೀಡಾಗಿದ್ದ ಜರ್ಮನ್ ವಿಂಗ್ಸ್ ಏರ್ ಲೈನ್ಸ್ ಸಂಸ್ಥೆಯ ತನಿಖೆ ಪ್ರಗತಿಯಲ್ಲಿದ್ದು, ಘಟನಾಸ್ಥಳದಲ್ಲಿ ತನಿಖಾಧಿಕಾರಿ..
ದುರಂತಕ್ಕೀಡಾದ ವಿಮಾನ (ಸಂಗ್ರಹ ಚಿತ್ರ)
ದುರಂತಕ್ಕೀಡಾದ ವಿಮಾನ (ಸಂಗ್ರಹ ಚಿತ್ರ)

ಪ್ಯಾರಿಸ್‌: ದಕ್ಷಿಣ ಫ್ರಾನ್ಸ್ ನಲ್ಲಿ ದುರಂತಕ್ಕೀಡಾಗಿದ್ದ ಜರ್ಮನ್ ವಿಂಗ್ಸ್ ಏರ್ ಲೈನ್ಸ್ ಸಂಸ್ಥೆಯ ತನಿಖೆ ಪ್ರಗತಿಯಲ್ಲಿದ್ದು, ಘಟನಾಸ್ಥಳದಲ್ಲಿ ತನಿಖಾಧಿಕಾರಿಗಳಿಗೆ ದೊರೆತಿದ್ದ ಬ್ಲ್ಯಾಕ್ ಬಾಕ್ಸ್ ನಲ್ಲಿನ ಮಾಹಿತಿಗಳು ದೊರೆತಿವೆ.

ಜರ್ಮನ್‌ವಿಂಗ್ಸ್‌ ವಿಮಾನ ಪತನಕ್ಕೆ ಕಾರಣಗಳನ್ನು ಹುಡುಕುತ್ತಿರುವ ತನಿಖಾಧಿಕಾರಿಗಳಿಗೆ ಕಾಕ್‌ ಪಿಟ್‌ ವಾಯ್ಸ ರೆಕಾರ್ಡರ್‌ನಿಂದ ದೊರಕಿರುವ ಹೊಸ ಮಾಹಿತಿಗಳು ತನಿಖಾಧಿಕಾರಿಗಳನ್ನೇ ದಂಗುಬಡಿಸಿದೆ. ವಿಮಾನ ಪ್ರಯಾಣದ ನಡುವೆ ಕಾಕ್ ಪೀಟ್ ನಿಂದ ಹೊರಹೋದ ಪೈಲಟ್ ಗೆ ಅಂತ್ಯದವರೆಗೂ ಕಾಕ್ ಪೀಟ್ ಪ್ರವೇಶ ಸಾಧ್ಯವಾಗಲೇ ಇಲ್ಲ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಕಾಕ್ ಪೀಟ್ ವಾಯ್ಸ್ ರೆಕಾರ್ಡರ್ ನಲ್ಲಿ ದಾಖಲಾಗಿರುವಂತೆ ಕಾಕ್ ಪೀಟ್ ಬಿಟ್ಟು ಹೊರಹೋಗಿದ್ದ ಪೈಲಟ್ ಮರಳಿ ವಾಪಸ್ ಆದಾಗ ಸುಮಾರು ಬಾರಿ ಕಾಕ್ ಪೀಟ್ ಬಾಗಿಲನ್ನು ಬಡಿದಿದ್ದಾನೆ. ಆದರೆ ಕಾಕ್ ಪೀಟ್ ಒಳಗಿದ್ದ ಮತ್ತೋರ್ವ ಪೈಲಟ್ ಕಾಕ್ ಪೀಟ್ ಬಾಗಿಲನ್ನು ತೆರೆಯಲು ವಿಫಲನಾಗಿದ್ದು, ಈ ವೇಳೆ ಹೊರಗಿದ್ದ ಪೈಲಟ್ 10 ವರ್ಷಗಳ ಎಕ್ಸ್ ಪೀರಿಯನ್ಸ್ ಇದೆ ಎಂದು ಹೇಳಿದ್ದಾನೆ. ಬಳಿಕ ಕಾಕ್ ಪೀಟ್ ಬಾಗಿಲನ್ನೇ ಒಡೆದು ಒಳಹೋಗಲು ಕೂಡ ಪೈಲಟ್ ಮುಂದಾಗಿದ್ದ ವಿಚಾರ ವಾಯ್ಸ್ ರೆಕಾರ್ಡರ್ ನಲ್ಲಿ ದಾಖಲಾಗಿದೆ.

ಮೊದಮೊದಲು ಲಘುವಾಗಿ ಕೇಳಿ ಬಂದ ಸದ್ದು ಅನಂತರ ದೊಡ್ಡದಾಗುತ್ತಾ ಹೋಗಿದೆ. ಆ ಬಳಿಕ ಹೊರಗೆ ನಿಂತಿದ್ದ ಪೈಲಟ್‌ ಕಾಕ್‌ಪಿಟ್‌ನ ಬಾಗಿಲನ್ನು ಒಡೆದೇ ಒಳಗೆ ಬರುವ ಪ್ರಯತ್ನ ಮಾಡಿರುವ ಸದ್ದು ಕೂಡ ದಾಖಲಾಗಿದೆ. ಆದರೆ ಕಾಕ್‌ಪಿಟ್‌ನ ಬಾಗಿಲು ತೆರೆದುಕೊಳ್ಳಲೇ ಇಲ್ಲ. ಕಾಕ್‌ಪಿಟ್‌ನ ಒಳಗಿದ್ದ ಪೈಲಟ್‌ ಒಂಟಿಯಾಗಿದ್ದು, ಬಹುತೇಕ ಬಂಧಿಯಾಗಿದ್ದ. ಕಾಕ್‌ಪಿಟ್‌ನ ಹೊರಗಿದ್ದ ಪೈಲಟ್ ನದ್ದು ಕೂಡ ಇಂತಹುದೇ ಸ್ಥಿತಿಯಾಗಿತ್ತು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಚ್ಚ ಪೈಲಟ್ ಗಳು ಕಾಕ್ ಪೀಟ್ ಬಾಗಿಲು ತೆರೆಯುವ ಗೊಂದಲದಲ್ಲಿದ್ರೆ ಇತ್ತ ವಿಮಾನವು ಇದೇ ಹಂತದಲ್ಲಿ 38,000 ಅಡಿ ಎತ್ತರದಿಂದ ತೀರ ಕೆಳ ಮಟ್ಟಕ್ಕೆ, ಅಂದರೆ ಎಂಟು ಸಾವಿರ ಅಡಿಗಳಿಗೂ ಕೆಳ ಮಟ್ಟಕ್ಕೆ ಬಂದು ಕಡಿದಾದ ಆಲ್ಪ್ಸ್ ಪರ್ವತ ಶ್ರೇಣಿಗೆ ಬಡಿದುಕೊಂಡಿದೆ. ಪರಿಣಾಮವಾಗಿ ವಿಮಾನದಲ್ಲಿದ್ದ ಎಲ್ಲ 150 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಇನ್ನು ಕಾಕ್‌ಪಿಟ್‌ನಲ್ಲಿದ್ದ ಇಬ್ಬರು ಪೈಲಟ್‌ಗಳ ಪೈಕಿ ಓರ್ವ ಪೈಲಟ್ ಏತಕ್ಕಾಗಿ ಹೊರ ಹೋದ ಮತ್ತು ಏತಕ್ಕಾಗಿ ಆತನಿಕೆ ಮತ್ತೆ ಕಾಕ್ ಪೀಟ್ ಪ್ರವೇಶ ಸಾಧ್ಯವಾಗಲಿಲ್ಲ. ಕಾಕ್‌ಪಿಟ್‌ ಒಳಗಿದ್ದ ಪೈಲಟ್‌ಗೆ ಏಕೆ ಬಾಗಿಲು ತೆರೆಯಲು ಆಗಲಿಲ್ಲ, ಆತ ಬೇಕೆಂದೇ ಒಳಗೇ ಉಳಿದು ಬಿಟ್ಟನೇ, ಕಾಕ್‌ಪಿಟ್‌ನಿಂದ ಹೊರಹೋದ ಪೈಲಟ್‌ನ ಉದ್ದೇಶವೇನಿತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ತನಿಖಾಧಿಕಾರಿಗಳು ಈಗಿನ್ನು ಉತ್ತರ ಕಂಡುಹಿಡಿಯಬೇಕಾಗಿದೆ.

ಸ್ಪೇನ್‌ನ ಬಾರ್ಸೆಲೋನಾದಿಂದ ಜರ್ಮನಿಯ ಡಸೆಲ್‌ಡಾರ್ಫ್ ಗೆ ಹೊರಟಿದ್ದ ವಿಮಾನ ಕೆಲವೇ ಗಂಟೆಗಳಲ್ಲಿ ಆಲ್ಪ್ಸ್ ಪರ್ವತ ಶ್ರೇಣಿಗೆ ಬಡಿದು ದುರಂತಕ್ಕೀಡಾಗಿತ್ತು. ವಿಮಾನದಲ್ಲಿದ್ದ 6 ಮಂದಿ ಸಿಬ್ಬಂದಿಗಳು ಸೇರಿದಂತೆ ಎಲ್ಲ 150 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com