ಸೆ.30ಕ್ಕೆ ರಾಹುಲ್ ಪಟ್ಟಾಭಿಷೇಕ?

ರಾಹುಲ್ ಗಾಂಧಿ ಪಟ್ಟಾಭಿ ಷೇಕಕ್ಕೆ ಮುಹೂರ್ತ ನಿಗದಿಯಾಗಿದ್ದು, ಎಲ್ಲವೂ ಅಂದುಕೊಂಡಂತಾದರೆ, ಸೆ. 30ಕ್ಕೆ ಅವರ ಪಟ್ಟಾಭಿಷೇಕ..
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

ನವದೆಹಲಿ: ರಾಹುಲ್ ಗಾಂಧಿ ಪಟ್ಟಾಭಿ ಷೇಕಕ್ಕೆ ಮುಹೂರ್ತ ನಿಗದಿಯಾಗಿದ್ದು, ಎಲ್ಲವೂ ಅಂದುಕೊಂಡಂತಾದರೆ, ಸೆ. 30ಕ್ಕೆ ಅವರ ಪಟ್ಟಾಭಿಷೇಕ ಅಂದರೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ಇದಕ್ಕೂ ಮುನ್ನ ದೇಶಾದ್ಯಂತ ಸಾಂಸ್ಥಿಕ ಚುನಾವಣೆ ನಡೆಯಲಿದೆ. ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಕರ್ನಾಟಕದ ಮಾಜಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ಹೇಳಿಕೆಯಿಂದ ಬಹಿರಂಗವಾಗಿದೆ. ಇದರ ಜತೆಗೆ ರಾಹುಲ್ ಗಾಂಧಿ ಕೂಡ ಪಕ್ಷದಲ್ಲಿನ ಹಿರಿಯರ ಬಗ್ಗೆ ನೊಂದು ರಜೆ ಮೇಲೆ ತೆರಳಿದ್ದಾರೆ ಎಂಬ ಗುಸುಗುಸು ಇದೆ. ಈ ಎಲ್ಲಾ ಅಂತೆಕಂತೆಗಳನ್ನು ಹೋಗಲಾಡಿಸಲು ಮತ್ತು ರಜೆ ಮೇಲೆ ತೆರಳಿರುವ ರಾಹುಲ್ ಗಾಂಧಿ ಅವರನ್ನು ವಾಪಸ್ ಕರೆತರಲು ಈ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಸಾಂಸ್ಥಿಕ ಚುನಾವಣೆ
ಜು. 31ಕ್ಕೂ ಮುನ್ನ ದೇಶಾದ್ಯಂತ ಕಾಂಗ್ರೆಸ್‍ನ ಪದಾಧಿಕಾರಿಗಳ ಚುನಾವಣೆ ನಡೆಯಲಿದೆ. ಇದು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಗುಜರಾತ್, ಹರ್ಯಾಣ,  ಛತ್ತೀಸ್‍ಗಡ, ಹಿಮಾಚಲ ಪ್ರದೇಶ ಸೇರಿದಂತೆ 18 ರಾಜ್ಯಗಳಲ್ಲಿ ಸಾಂಸ್ಥಿಕ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಕರ್ನಾಟಕ, ಬಿಹಾರ, ಆಂಧ್ರ, ಪಂಜಾಬ್, ರಾಜ ಸ್ಥಾನ, ಮಧ್ಯಪ್ರದೇಶ ದಲ್ಲಿ ನಡೆಯಲಿದೆ. ಇದಾದ ಬಳಿಕ ಸೆ. 30 ರಂದು ಕಾಂಗ್ರೆಸ್ ಮುಖ್ಯಸ್ಥನ ಆಯ್ಕೆ ನಡೆಯಲಿದೆ. ಸೋನಿಯಾ ಗಾಂಧಿ ಅವರು ಕಳೆದ ಮಾ. 14 ರಂದು ಕಾಂಗ್ರೆಸ್ ಅಧ್ಯಕ್ಷೆಯಾಗಿ 17 ವರ್ಷ ಪೂರೈಸಿದ್ದಾರೆ. ಇದು ಕಾಂಗ್ರೆಸ್ ಇತಿಹಾಸದಲ್ಲೇ ದಾಖಲೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com