
ಭೋಪಾಲ್: ಮಧ್ಯಪ್ರದೇಶ ಅರಣ್ಯ ಸಿಬ್ಬಂದಿ ನೇಮಕಾತಿ ಪರೀಕ್ಷಾ ಮಂಡಳಿ(ವ್ಯಾಪಮ್) ಹಗರಣ ಪ್ರಮುಖ ಆರೋಪಿ ಗವರ್ನರ್ ರಾಮ್ ನರೇಶ್ ಯಾದವ್ ಅವರ ಪುತ್ರನ ಸಾವು ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಅವರ ಕುಟುಂಬ ಸದಸ್ಯರು ಇದು ಸಹಜ ಸಾವು ಎಂದು ಹೇಳಿಕೆ ನೀಡಿದ್ದರೂ, ಶೈಲೇಶ್ ಅವರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂಬ ಅನುಮಾನಗಳು ಬಲವಾಗಿದೆ. ಇದು ಸಹಜ ಸಾವಾಗಿದ್ದರಿಂದ ನಾವು ಈ ಪ್ರಕರಣದ ತನಿಖೆ ನಡೆಸಲು ಒತ್ತಾಯಿಸಲ್ಲ ಎಂದು ಮೃತ ಶೈಲೇಶ್ ಅಣ್ಣ ಕಮಲೇಶ್ ಯಾದವ್ ಹೇಳಿರುವುದು ಅನುಮಾನಗಳಿಗೆ ಎಡೆಮಾಡಿದೆ. ಮೇಲ್ನೋಟಕ್ಕೆ ಹಾರ್ಟ್ ಅಟ್ಯಾಕ್ ಎಂದಿರುವ ಪೊಲೀಸರು ಅಂತಿಮ ವರದಿಯನ್ನು ನಿರೀಕ್ಷಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಭೋಪಾಲ್‍ನ ಆಸ್ಪತ್ರೆಗೆ ದಾಖಲಾಗಿದ್ದ ಗವರ್ನರ್ ರಾಮ್ ನರೇಶ್ ಯಾದವ್ ಅವರನ್ನು ಏರ್ ಆ್ಯಂಬುಲೆನ್ಸ್‍ನಲ್ಲಿ ಲಖನೌ ಕರೆತರಲಾಗಿದೆ.
ವ್ಯಾಪಮ್ ಹಗರಣದ ಆರೋಪ ಎದುರಿಸುತ್ತಿರುವ ಶೈಲೇಶ್ ಯಾದವ್ ಬುಧವಾರ ತಮ್ಮ ತಂದೆಯ ಅಧಿಕೃತ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. 3ನೇ ದರ್ಜೆ ಶಿಕ್ಷಕರ ನೇಮಕಾತಿ ವೇಳೆ ದುಡ್ಡು ತೆಗೆದುಕೊಂಡು 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಆರೋಪವೂ ಶೈಲೇಶ್ ಮೇಲಿದೆ.
Advertisement