ಆಪ್ ವಿರುದ್ಧ ಸಂಚು ನಡೆಸಲಾಗಿತ್ತು: ಕೇಜ್ರಿವಾಲ್

ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ದೆಹಲಿ ಚುನಾವಣೆಗೂ ಮುನ್ನ ಪಕ್ಷದ ವಿರುದ್ಧ ಸಂಚು ನಡೆಸಿದ್ದರು ಎಂದು ಆಮ್ ಆದ್ಮಿ...
ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)

ನವದೆಹಲಿ: ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ದೆಹಲಿ ಚುನಾವಣೆಗೂ ಮುನ್ನ ಪಕ್ಷದ ವಿರುದ್ಧ ಸಂಚು ನಡೆಸಿದ್ದರು ಎಂದು ಆಮ್ ಆದ್ಮಿ ಪಕ್ಷದ ಮುಖಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.

ಈ ಹಿಂದೆ ಆಪ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ಬಗ್ಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿದ್ದ ಅರವಿಂದ್ ಕೇಜ್ರಿವಾಲ್ ಅವರು, ಕೇಜ್ರಿವಾಲ್ ಅವರು ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಪಕ್ಷದ ವಿರುದ್ಧ ನಡೆಸಿದ ಸಂಚಿನ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಯಾದವ್ ಮತ್ತು ಭೂಷಣ್ ದೆಹಲಿ ಚುನಾವಣೆ ನಡೆಯುವ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಪಕ್ಷವನ್ನು ನಿರ್ನಾಮ ಮಾಡುವಂತೆ ಪಕ್ಷದ ಹಿರಿಯ ಸದಸ್ಯರಿಗೆ ತಾಕೀತು ಮಾಡಿದ್ದರು. ಪಕ್ಷ ಬೆಳವಣಿಗೆ ಹೊಂದುವುದು ಅವರಿಗೆ ಬೇಕಾಗಿರಲಿಲ್ಲ. ಈ ರಾಜಕೀಯ ಕಳೆದ ಒಂದು ವರ್ಷದಿಂದ ನಡೆಯುತ್ತಿತ್ತು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಈ ಕಾರ್ಯಕಾರಿಣಿ ಸಭೆ ವಿಡಿಯೋವನ್ನು ಆಪ್ ಪಕ್ಷ ಬಿಡುಗಡೆ ಮಾಡಿದ್ದು, ಕೇಜ್ರಿವಾಲ್ ಅವರು ಈ ವಿಡಿಯೋದಲ್ಲಿ ಸುಮಾರು 45 ನಿಮಿಷಗಳ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. "ಕಳೆದ ವರ್ಷ ಫೆಬ್ರವರಿಯಲ್ಲಿ ಯೋಗೇಂದ್ರ ಯಾದವ್ ಅವರ ಪರ್ಸನಲ್ ಸೆಕ್ರೇಟರಿ ವಿಜಯ್ ರಾಮನ್ ಎಂಬಾತ, ನಮ್ಮ ಪಕ್ಷದ ಸ್ವಯಂಸೇವಕ ಸತ್ಯನನ್ನು ಕರೆಯಿಸಿ, ನಾನು ಪಕ್ಷದ ಸಂಚಾಲಕ ಹುದ್ದೆಯಿಂದ ಕೇಜ್ರಿವಾಲ್ ರನ್ನು ಕಿತ್ತುಹಾಕುತ್ತೇನೆ. ಆಗ ನಾನೇ ಮುಖ್ಯಮಂತ್ರಿಯಾಗುತ್ತೇನೆ" ಎಂದು ಕೂಡ ಕೇಜ್ರಿವಾಲ್ ಹೇಳಿದ್ದರು.

"ಆದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಾಗ ನನ್ನ ಟಾರ್ಗೆಟ್ ಮಾಡಿದ್ದರು. ಆಗ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಾನು ಕುಸಿದುಬಿದ್ದಿದ್ದೆ, ಕಣ್ಣೀರುಗರೆದು ನಮ್ಮ ಪಕ್ಷದ ಪ್ರತಿಯೊಬ್ಬರಿಗೂ ಹೇಳಿದ್ದೆ, ನಾನು ಮೋದಿ, ಗಡ್ಕರಿ, ಖುರ್ಷಿದ್, ಅಂಬಾನಿ ವಿರುದ್ಧ ಬೇಕಿದ್ರೆ ಸ್ಪರ್ಧಿಸುತ್ತೇನೆ. ಆದರೆ ನಾನು ಭೂಷಣ್ ಮತ್ತು ಯಾದವ್ ವಿರುದ್ಧ ಹೋರಾಟ ನಡೆಸಲ್ಲ ಎಂದಿದ್ದೆ. ಅಲ್ಲದೆ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದೆ. ಆದರೆ ಭೂಷಣ್ ಮತ್ತು ಯಾದವ್ ನನ್ನ ನಿರ್ಧಾರ ವಾಪಸ್ ತೆಗೆದುಕೊಳ್ಳುವಂತೆ ಮನವೊಲಿಸಿದ್ದರು. ಇದೀಗ ಭೂಷಣ್ ಮತ್ತು ಯಾದವ್ ಪಕ್ಷವನ್ನು ನಾಶ ಮಾಡಲು ಹೊರಟಿದ್ದಾರೆ. ಪಕ್ಷದಲ್ಲಿ ಸೌಹಾರ್ದತೆ, ಒಗ್ಗಟ್ಟು ಉಳಿಸಲು ನಾನು ಸಾಕಷ್ಟು ಶ್ರಮಿಸಿದ್ದೆ. ಅದಕ್ಕೆ ಇಬ್ಬರು ನಾಯಕರು ಸಹಕರಿಸಲಿಲ್ಲ" ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಸಂಬಂಧಿಸಿದ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com