
ಸನಾ/ನವದೆಹಲಿ: ಆಂತರಿಕ ಸಂಘರ್ಷ ದಿಂದ ಕಂಗೆಟ್ಟಿರುವ ಅರಬ್ ರಾಷ್ಟ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ನಾಗರಿಕ ರನ್ನು ಪಾರು ಮಾಡಲು ಕೇಂದ್ರ ಸರ್ಕಾರ
ಮುಂದಾಗಿದೆ. ಅದಕ್ಕಾಗಿ ರಾಜಧಾನಿ ಸನಾಗೆ ವಿಶೇಷ ವಿಮಾನ ಕಳುಹಿಸಿಕೊಟ್ಟಿದೆ. ಪ್ರತಿ ದಿನ 3 ಹಾರಾಟಗಳನ್ನು ನಡೆಸಲು ಮುಂದಾ ಗಿದೆ. ನಾಗರಿಕ ವಿಮಾನ ಯಾನ
ಸಚಿವಾಲಯದ ಜತೆಗೆ ಚರ್ಚೆ ನಡೆಸಿ ವೇಳಾಪಟ್ಟಿ ಅಂತಿಮಗೊಳಿಸಲಾಗುವುದೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಜತೆಗೆ 1,500 ಮಂದಿ
ಯನ್ನು ಕರೆದೊಯ್ಯುವ ಸಾಮರ್ಥ್ಯ ಇರುವ ಹಡಗನ್ನು ಕೂಡ ಕಳುಹಿಸಿಕೊಡಲಾಗಿದೆ ಎಂದಿದ್ದಾರೆ ಅವರು.
Advertisement