
ವಾಷಿಂಗ್ಟನ್: ಭಾರತದ ಪ್ರಧಾನಮಂತ್ರಿ ನರೇಂದ್ರಿ ಮೋದಿ ಅವರು ನನ್ನ ಜೀವನದಲ್ಲೇ ಎಂದೂ ಕಂಡಿರದ ಭಾರತದ ಬಲಿಷ್ಟ ನಾಯಕ ಎಂದು ಅಮೆರಿಕದ ಹಿರಿಯ ರಿಪಬ್ಲಿಕನ್ಸೆನೆಟರ್ ಜಾನ್ ಮಕೇನ್ ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಅಮೆರಿಕಾದ ಯುದ್ಧತಂತ್ರ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದಲ್ಲಿ ಮಾತನಾಡಿರುವ ಅಮೇರಿಕಾದ ಹಿರಿಯ ರಿಪಬ್ಲಿಕನ್ಸೆನೆಟರ್ ಜಾನ್ ಮಕೇನ್ ಅವರು, ನರೇಂದ್ರ ಮೋದಿ ಅವರ ನಾಯಕತ್ವದ ರೀತಿ ನನ್ನನ್ನುಅವರೆಡೆಗೆ ಪ್ರಭಾವಿತನಾಗುವಂತೆ ಮಾಡಿದೆ. ಮೋದಿ ಅವರಂತಹ ನಾಯಕತ್ವವನ್ನು ನನ್ನ ಜೀವನದಲ್ಲಿಯೇ ಎಂದೂಭಾರತದಲ್ಲಿ ನೋಡಿರಲಿಲ್ಲ. ಅವರದ್ದು ಬಲಿಷ್ಠ ನಾಯಕತ್ವ ಎಂದು ಜಾನ್ ಮಕೇನ್ ಮೋದಿ ಅವರನ್ನು ಹೊಗಳಿದ್ದಾರೆ.
Advertisement