ಲಖ್ವಿ ವಿಚಾರ ಪರಿಶೀಲಿಸ್ತೇವೆ ಭಾರತಕ್ಕೆ ವಿಶ್ವಸಂಸ್ಥೆ ವಾಗ್ದಾನ

ಮುಂಬೈ ದಾಳಿ ರೂವಾರಿ, ಲಷ್ಕರ್ ಉಗ್ರ ಝಕಿವುರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ವಿಶ್ವಸಂಸ್ಥೆಗೆ...
ಝಕಿವುರ್ ರೆಹಮಾನ್ ಲಖ್ವಿ
ಝಕಿವುರ್ ರೆಹಮಾನ್ ಲಖ್ವಿ

ವಿಶ್ವಸಂಸ್ಥೆ/ನವದೆಹಲಿ: ಮುಂಬೈ ದಾಳಿ ರೂವಾರಿ, ಲಷ್ಕರ್ ಉಗ್ರ ಝಕಿವುರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ವಿಶ್ವಸಂಸ್ಥೆಗೆ ಭಾರತ ಪತ್ರ ಬರೆದದ್ದು ಫಲ ನೀಡಿದೆ. ಇದೊಂದು ಗಂಭೀರ ವಿಚಾರ ಎಂದಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯೊಂದು  ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವ ವಾಗ್ದಾನ ನೀಡಿದೆ. ಸಮಿತಿಯ ರಾಯಭಾರಿ ಜಿಮ್ ಮೆಕ್‍ಲೇ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಅಶೋಕ್ ಮುಖರ್ಜಿ ಯವರಿಗೆ ಈ ಭರವಸೆ ನೀಡಿದ್ದಾರೆ. ಶೀಘ್ರವೇ ಈ ಬಗ್ಗೆ ಸಭೆ ನಡೆಯಲಿದ್ದು, ಅದರಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದೆಂದು ತಿಳಿಸಿದ್ದಾರೆ. ಕೇಂದ್ರ ಸ್ವಾಗತ: ಇದೇ ವೇಳೆ ಲಖ್ವಿ ವಿರುದ್ಧ  ಶೀಘ್ರವೇ ಸಭೆ ನಡೆಸಿ ಚರ್ಚಿಸುವ ಭರವಸೆ ನೀಡಿದ್ದನ್ನು ಕೇಂದ್ರ ಸರ್ಕಾರ ಸ್ವಾಗತಿಸಿದೆ. ಇದೊಂದು ಉತ್ತಮ ಬೆಳವಣಿಗೆ ಎಂದಿದ್ದಾರೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು.

ಪಾಕ್ ಕ್ಯಾತೆ: ಈ ನಡುವೆ, ಅಕಸ್ಮಿಕವಾಗಿ ಭಾರತದಗಡಿಯೊಳಕ್ಕೆ ಬಂದ ದೇಶದ ಪ್ರಜೆಯನ್ನು ಬಿಎಸ್‍ಎಫ್ ಯೋಧರು ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ರೈತನೊಬ್ಬ ಗೋಧಿ  ಬೆಳೆ ಕಟಾವು ಮಾಡಿಕೊಂಡು ತಿಳಿಯದೆ ಭಾರತದ ಗಡಿಯೊ ಳಕ್ಕೆ ಪ್ರವೇಶಿಸಿದ್ದ. ಆದರೆ ಬಿಎಸ್‍ಎಫ್ ಯೋಧರು ಗುರುತು ಹಿಡಿಯದೆ ಈ ಕುಕೃತ್ಯ ಎಸಗಿದ್ದಾರೆ ಎನ್ನುವುದು ಪಾಕ್ ಆರೋಪ

ರಸ್ತೆ ನಿರ್ಮಾಣಕ್ಕೆ ವಿರೋಧ

ಇಷ್ಟು ಮಾತ್ರವಲ್ಲದೆ ಭಾರತ-ಅಫ್ಘಾನಿಸ್ತಾನನಡುವಿನ ರಸ್ತೆ ಸಂಪರ್ಕಕ್ಕೂ ಪಾಕ್ ಸರ್ಕಾರ ಪ್ರತಿ ರೋಧ ಒಡ್ಡಿದೆ. ಚೀನಾ ಜತೆ ಬಹುಕೋಟಿ ವೆಚ್ಚದ ಆರ್ಥಿಕ ಕಾರಿಡಾರ್‍ಗೆ ಸಹಿ ಹಾಕಿರುವ ಪಾಕ್ ಸರ್ಕಾರ ಕರಾಚಿ ಮೂಲಕ ಭಾರತಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಯೋ ಜನೆಗೆ ಅನುಮತಿ ನೀಡಲು ನಿರಾಕರಿಸಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಆಫ್ಘಾನ್ ಅಧ್ಯಕ್ಷ ಅಶ್ರಾಫ್ ಘನಿ, ಪಾಕಿಸ್ತಾನ ಒಪ್ಪದಿದ್ದರೆ ಆ ರಾಷ್ಟ್ರಕ್ಕೆ ಮಧ್ಯ ಏಷ್ಯಾ ಪ್ರವೇಶ ನಿಷೇಧಿಸುತ್ತೇವೆ. ಪಾಕ್‍ಗೆ ಮಧ್ಯ ಏಷ್ಯಾ ಪ್ರವೇಶ ಬೇಕೆಂದರೆ ಅದೂ ನಮಗೆ ದಾರಿ ಬಿಟ್ಟರೆ ಒಳ್ಳೆಯದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com