ಬ್ರಿಟನ್‌ನಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಡೇವಿಡ್ ಕ್ಯಾಮರಾನ್

ಪ್ರಧಾನಿ ಡೇವಿಡ್ ಕ್ಯಾಮರಾನ್ ನೇತೃತ್ವದ ಆಡಳಿತಾರೂಢ ಕರ್ನ್ಸವೇಟಿವ್ ಪಕ್ಷ ಜಯಭೇರಿ ಗಳಿಸಿದ್ದು, ಡೇವಿಡ್ ಕ್ಯಾಮರಾನ್ ಮತ್ತೆ ಪ್ರಧಾನಿಯಾಗಿ...
ಡೇವಿಡ್ ಕ್ಯಾಮರಾನ್ ಪತ್ನಿ ಸಮಂತ
ಡೇವಿಡ್ ಕ್ಯಾಮರಾನ್ ಪತ್ನಿ ಸಮಂತ

ಲಂಡನ್: ಪ್ರಧಾನಿ ಡೇವಿಡ್ ಕ್ಯಾಮರಾನ್ ನೇತೃತ್ವದ ಆಡಳಿತಾರೂಢ ಕರ್ನ್ಸವೇಟಿವ್ ಪಕ್ಷ ಜಯಭೇರಿ ಗಳಿಸಿದ್ದು, ಡೇವಿಡ್ ಮತ್ತೆ ಪ್ರಧಾನಿಯಾಗಿ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದ್ದಾರೆ.

ಬ್ರಿಟನ್ ಸಂಸತ್ ನ 650 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ಇಂದು ನಡೆದ ಮತ ಎಣಿಕೆಯಲ್ಲಿ ಕರ್ನ್ಸವೇಟಿವ್ ಪಕ್ಷ 329 ಸ್ಥಾನಗಳನ್ನು ಪಡೆದಿದೆ. ಈ ಬಗ್ಗೆ ಡೇವಿಡ್ ಟ್ವೀಟ್ ಮಾಡುವ ಮೂಲಕ ಪಕ್ಷದ ಗೆಲುವನ್ನು ಖಚಿತಪಡಿಸಿದ್ದಾರೆ.

650 ಸ್ಥಾನಗಳಲ್ಲಿ ಬಹುತೇಕ ಸ್ಥಾನಗಳ ಫಲಿತಾಂಶ ಹೊರಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ 650 ಸ್ಥಾನಗಳಲ್ಲಿ 329 ಸ್ಥಾನಗಳಲ್ಲಿ ಆಡಳಿತಾರೂಢ ಕರ್ನ್ಸವೇಟಿವ್ ಪಕ್ಷ ಜಯಗಳಿಸಿದೆ. ಬ್ರಿಟನ್ ಆಡಳಿತ ಗದ್ದುಗೆ ಏರಲು 326 ಸ್ಥಾನಗಳ ಅಗತ್ಯವಿದೆ.

ಬ್ರಿಟನ್ ನ ಕರ್ನವೇಟಿವ್ ಮತ್ತು ವಿಪಕ್ಷವಾದ ಲೇಬರ್ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹಣಾಹಣಿ ಇದ್ದು, ಆ ನಿಟ್ಟಿನಲ್ಲಿ ಯಾವುದೇ ಪಕ್ಷ ಗೆದ್ದರೂ ಬಹುಮತದ ಅಂತರ ತುಂಬಾ ಕಡಿಮೆ ಇರಲಿದೆ ಎಂದು ವಿಶ್ಲೇಷಿಸಲಾಗಿತ್ತು. ಚುನಾವಣೋತ್ತರ ಸಮೀಕ್ಷೆಯಲ್ಲಿ ಕರ್ನ್ಸವೇಟಿವ್ ಪಕ್ಷ 316 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು.

ಬ್ರಿಟನ್ ಚುನಾವಣೆಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಲೇಬರ್ ಪಾರ್ಟಿ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡ ಇದ್ ಮಿಲಿಬಂಡ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಗೆ ಗೆಲುವು
ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಅಳಿಯ ರಿಶಿ ಸುನಕ್ ಅವರು ರಿಚ್ ಮಂಡ್ ಕ್ಷೇತ್ರದಲ್ಲಿ ಕರ್ನ್ಸವೇಟಿವ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com