ಅಂಚೆಯಿಂದಲೂ ಇ-ಕಾಮರ್ಸ್ ಸೇವೆ

ಎಲ್ಲರೂ ಇ- ಕಾಮರ್ಸ್ ಬಗ್ಗೆ ಚರ್ಚಿಸುತ್ತಿರುವ ಹೊತ್ತಿನಲ್ಲಿ ಭಾರತೀಯ ಅಂಚೆ ಕೂಡಾ ಇ-ಕಾಮರ್ಸ್‍ನ ಲಾಭ ಪಡೆಯಲು ಮುಂದಾಗಿದೆ...
ಭಾರತೀಯ ಅಂಚೆಯಿಂದಲೂ ಇ-ಕಾಮರ್ಸ್ ಸೇವೆ
ಭಾರತೀಯ ಅಂಚೆಯಿಂದಲೂ ಇ-ಕಾಮರ್ಸ್ ಸೇವೆ

ನವದೆಹಲಿ: ಎಲ್ಲರೂ ಇ- ಕಾಮರ್ಸ್ ಬಗ್ಗೆ ಚರ್ಚಿಸುತ್ತಿರುವ ಹೊತ್ತಿನಲ್ಲಿ ಭಾರತೀಯ ಅಂಚೆ ಕೂಡಾ ಇ-ಕಾಮರ್ಸ್‍ನ ಲಾಭ ಪಡೆಯಲು ಮುಂದಾಗಿದೆ.

ಇ-ಕಾಮರ್ಸ್ ನ ವಿಶೇಷ ವಹಿವಾಟಿಗಾಗಿಯೇ ಮೊತ್ತಮೊದಲ ಇ-ಕಾಮರ್ಸ್ ಸೆಂಟರ್ ಅನ್ನು ದೆಹಲಿಯ ಸಫ್ದರ್ ಜಂಗ್‍ನಲ್ಲಿ ತೆರೆಯುತ್ತಿದೆ. ಪ್ಲಿಪ್ ಕಾರ್ಟ್, ಇ-ಬೇ, ಸ್ನ್ಯಾಪ್ ಡೀಲ್, ಅಮೆಜಾನ್ ಪೇಟೈಮ್, ಯೆಪ್‍ಮಿ ಸೇರಿದಂತೆ ಡಜನ್‍ಗಟ್ಟಲೇ ಇರುವ ಇ-ಕಾಮರ್ಸ್ ಸಂಸ್ಥೆಗಳಿಗೆ ವಿಶೇಷ ಸೇವೆಯನ್ನು ಅಂಚೆ ಇಲಾಖೆ ಒದಗಿಸಲಿದೆ.

ಇ-ಕಾಮರ್ಸ್ ಸೆಂಟರ್ ನಿತ್ಯ 30 ಸಾವಿರ ಪಾರ್ಸೆಲ್‍ಗಳನ್ನು ಗ್ರಾಹಕರಿಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ, ಶೀಘ್ರದಲ್ಲೇ ಈ ಸಾಮರ್ಥ್ಯ ದುಪ್ಪಟ್ಟುಗೊಳ್ಳಲಿದೆ. ಬರುವ ದಿನಗಳಲ್ಲಿ ಬೆಂಗಳೂರು ಸೇರಿಂದತೆ ಪ್ರಮುಖ ನಗರಗಳಲ್ಲೂ ಇ-ಕಾಮರ್ಸ್ ಸೆಂಟರ್ ಗಳನ್ನು ಪ್ರಾರಂಭಿಸಲಿದೆ. ತ್ವರಿತ ಮತ್ತು ವಿಶ್ವಾಸಾರ್ಹ ಅಂಚೆ ವಿತರಣೆಗೆ ಹಸರಾದ ಅಂಚೆ ಇಲಾಖೆ ಈಗಾಗಲೇ ತ್ವರಿತ ಅಂಚೆ ವಿತರಣೆಯಲ್ಲೂ ಅಗ್ರಸ್ಥಾನದಲ್ಲಿದೆ. ಇ-ಕಾಮರ್ಸ್ ಸೆಂಟರ್ ಮೂಲಕ 24 ಗಂಟೆಯೊಳಗೆ ಸರಕು ವಿತರಣಾ ಸೇವೆ ಒದಗಿಸಲಿದೆ. ತಂತ್ರಾಂಶ ಆಧಾರಿತ ವಿತರಣಾ ವ್ಯವಸ್ಥೆ ಇದಾಗಿರುವುದರಿಂದ ಸರಕು ವಿತರಣೆಯ ಯಾವ ಹಂತದಲ್ಲಿದ ಎಂಬುದರ ಬಗ್ಗೆ ರಿಯಲ್ ಟೈಮ್ ಮಾಹಿತಿ ಪಡೆಯಬಹುದು. ಮೇ. 11ರಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಈ ಸೇವೆಯನ್ನು ಉದ್ಘಾಟಿಸಲಿದ್ದಾರೆ.

ಅಂಚೆಗೊಂದು ಆಪ್ಸ್!
ಅಂಚೆ ಇಲಾಖೆ ಸೇವೆ ಬಗ್ಗೆ ಈಗಾಗಲೇ ಸಾಕಷ್ಟು ಆಪ್ಸ್‍ಗಳಿವೆ. ಇವೆಲ್ಲವೂ ಖಾಸಗಿ ಕಂಪನಿಗಳು ರೂಪಿಸಿರುವ ಆಪ್ಸ್ ಗಳು. ಈಗ ಅಂಚೆ ಇಲಾಖೆಯೇ ವಿಶೇಷವಾಗಿ ಒಂದು ಆಪ್ಸ್ ರೂಪಿಸಿದೆ. ಹೆಸರು- ಇಂಡಿಯಾ ಪೋಸ್ಟ್ ಮೊಬೈಲ್ ಆಪ್. ಮೈಸೂರಿನ ಸೆಪ್ಟ್ ( ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಪೋಸ್ಟಲ್ ಟೆಕ್ನಾಲಜಿ) ಈ ಆಪ್ ರೂಪಿಸಿದೆ.

ಆಂಡ್ರಾಯ್ಡ್ ಆಧಾರಿತ ಈ ಆಪ್ ಇಡೀ ದೇಶದ ಅಂಚೆ ಕಚೇರಿಗಳು, ಪಿನ್ ಕೋಡ್‍ಗಳಂತಹ ಪ್ರಾಥಮಿಕ ಮಾಹಿತಿಯಿಂದ, ರವಾನಿಸಿದ ಅಂಚೆ ಮತ್ತು ಪಾರ್ಸೆಲ್‍ಗಳು ಯಾವ ಹಂತದಲ್ಲಿವೆ ಎಂಬುದರ ರಿಯಲ್ ಟೈಮ್ ಮಾಹಿತಿಯನ್ನು ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ. ಅಂಚೆ ಇಲಾಖೆಗೆ ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸುತ್ತಿರುವ ಸೆಪ್ಟ್, ಈಗಾಗಲೇ ಮೇಘದೂತ್, ಸ್ಪೀಡ್‍ನೆಟ್, ಇ-ಪೇಮೆಂಟ್, ಪ್ರಾಜೆಕ್ಟ್ ಆರೋ ಅಂತಹ ತಂತ್ರಾಂಶಗಳನ್ನು ರೂಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com