ದಂತೇವಾಡಕ್ಕೆ ಪ್ರಧಾನಿ ಮೋದಿ ಭೇಟಿ ಇಂದು

ಛತ್ತೀಸ್ ಘಡದ ನಕ್ಸಲ್ ಪೀಡಿತ ಜಿಲ್ಲೆ ದಂತೇವಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದಹೆಲಿ/ರಾಯ್ ಪುರ: ಛತ್ತೀಸ್ ಘಡದ ನಕ್ಸಲ್ ಪೀಡಿತ ಜಿಲ್ಲೆ ದಂತೇವಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ.

ಇದೇ ಮೊದಲ ಬಾರಿಗೆ ದಂತೇವಾಡಕ್ಕೆ ಭೇಟಿ ಕೊಡಲಿದ್ದಾರೆ. ಪ್ರಧಾನಿ ಅಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸಾಮಾಜಿಕ ಹಾಗೂ ಆರ್ಥಿಕ ಅಬಿsವೃದಿಟಛಿ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಇದೇ ವೇಳೆ ನಯಾ ರಾಯ್ಪುರದಲ್ಲಿ ಪ್ರಧಾನಿ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಪೆಂಡಾಲ್ ಧಾರಾಕಾರ ಗಾಳಿ ಮಳೆಯಿಂದ ಕುಸಿದು ಬಿದ್ದು 50 ಮಂದಿ ಪೊಲೀಸಲು ಗಾಯಗೊಂಡಿದ್ದರು.

ಹೀಗಾಗಿ, ಈ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಈ ಸ್ಥಳದಲ್ಲಿ ಇಂಡಿಯನ್ ಇನ್ಸ್ ಟಿಟ್ಯೂಟ್ ಟೆಕ್ನಾಲಜಿ ಸಂಸ್ಥೆಯನ್ನು ಪ್ರಧಾನಿ ಉದ್ಘಾಟಿಸಬೇಕಾಗಿತ್ತು. ಎರಡು ಮೆಗಾ ಅಲ್ಟ್ರಾ ಮೆಗಾ ಸ್ಟೀಲ್ ಪ್ಲಾಂಟ್ ಹಾಗೂ ರೋವ್ ಘಾಟ್-ಜಗದಾಲ್ಪುರ ನಡುವಿನ ಎರಡನೇ ಹಂತದ ರೈಲ್ವೇ ಹಳಿ ನಿರ್ಮಾಣ ಕಾಮಗಾರಿಗೆ ಇದೇ ವೇಳೆ ಮೋದಿ ಚಾಲನೆ ನೀಡಲಿದ್ದಾರೆ. ಈ ಮಧ್ಯೆ, ಬಡ ಮತ್ತು ಹಿಂದುಳಿದ ಮಕ್ಕಳಿಗಾಗಿಯೇ ಆರಂಭಿಸಲಾಗಿರುವ ಶೈಕ್ಷಣಿಕ ನಗರಕ್ಕೂ ಅವರು ಭೇಟಿ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com