
ನವದೆಹಲಿ: ನ್ಯಾಯಾಂಗ ನೇಮಕ ಆಯೋಗ ಮಾಡಿದ ಮೇಲೆ ನೀವು ತಪ್ಪೇ ಮಾಡುವುದಿಲ್ಲವೇ? ಇದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸಂವಿಧಾನ ಪೀಠ ಖಾರವಾಗಿ ಕೇಳಿದ ಪ್ರಶ್ನೆ.
ಕೊಲಿ ಜಿಯಂ ವ್ಯವಸ್ಥೆಯಲ್ಲಿ ತಪ್ಪಾಗಿವೆ ಎಂದು ಹೇಳುತ್ತಿದ್ದೀರಿ. ಅಂದರೆ, ಈ ವ್ಯವಸ್ಥೆಯಲ್ಲಿ ತಪ್ಪೇ ಆಗಲ್ಲ ಎಂಬುದು ನಿಮ್ಮ ವಾದವೇ ಎಂದು ಪ್ರಶ್ನಿಸಿದೆ. ಕೊಲಿಜಿಯಂ ವ್ಯವಸ್ಥೆಯಲ್ಲಿ ಆಗಿರುವ ತಪ್ಪಿನಂತೆ ನ್ಯಾಯಾಂಗ ನೇಮಕ ಆಯೋಗದಲ್ಲೂ ಆಗಬಹು ದಲ್ಲವೇ ಎಂದು ಅಭಿಪ್ರಾಯಪಟ್ಟಿದೆ.
ಎನ್‍ಜೆಎಸಿ ಕೂಡ ಸದಸ್ಯರಲ್ಲಿ ಇರುವ ಮಾಹಿತಿಯನ್ನು ಆಧರಿಸಿ ನ್ಯಾಯಾಧೀಶರನ್ನು ನೇಮಿಸುತ್ತದೆ. ಹಾಗಿದ್ದ ಮೇಲೆ ಅವರು ಕೂಡ ತಪ್ಪು ಮಾಡಲು ಸಾಧ್ಯವಿದೆ ಎಂದು ನ್ಯಾ. ಜೆ.ಎಸ್. ಖೆಹರ್ ನೇತೃತ್ವದ ಸಂವಿಧಾನ ಪೀಠ ಹೇಳಿದೆ.
ನ್ಯಾಯಾಧೀಶರನ್ನು ಕೊಲಿಜಿಯಂ ನೇಮಿಸುತ್ತೋ ಅಥವಾ ಎನ್‍ಜೆಎಸಿ ಅಥವಾ ಇತರೆ ಸಂಸ್ಥೆ ಮೂಲಕ ನೇಮಕ ಮಾಡಲಾಗುತ್ತೋ ಎನ್ನುವುದು ಇಲ್ಲಿ ಮುಖ್ಯವಲ್ಲ. ಆದರೆ, ಆಯ್ಕೆಯು ವ್ಯವಸ್ಥೆ ಕೈಗೆ ಸಿಕ್ಕಿರುವ ಮಾಹಿತಿಯನ್ನು ಆಧರಿಸಿ ನಡೆಯಬೇಕಾಗುತ್ತದೆ ಎಂದಿದೆ.
Advertisement