
ಹೈದರಾಬಾದ್: ಹೈದರಾಬಾದ್: ಆರು ವರ್ಷಗಳ ಹಿಂದೆ ದೇಶದ ಕಾರ್ಪೊರೇಟ್ ಕ್ಷೇತ್ರವನ್ನು ತಲ್ಲಣಗೊಳಿಸಿದ್ದ ಬೃಹತ್ ಲೆಕ್ಕ ಪತ್ರ ಹಗರಣವಾದ ಸತ್ಯಂ ಕಂಪ್ಯೂಟರ್ ಹಗರಣದ ರುವಾರಿ, ಸತ್ಯಂ ಕಂಪನಿಯ ಸಂಸ್ಥಾಪಕ ರಾಮಲಿಂಗ ರಾಜು ಅವರಿಗೆ ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ಸತ್ಯಂ ಕಂಪ್ಯೂಟರ್ ಹಗರಣದ ತೀರ್ಪು ಏಪ್ರಿಲ್ 9ನೇ ತಾರೀಖಿಗೆ ಹೊರಬಿದ್ದಿದ್ದು, ರಾಮಲಿಂಗ ರಾಜು ಹಾಗೂ ಅವರ ಸಹೋದರ, ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಮರಾಜು ಮತ್ತು ಇತರೆ 8 ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ರಾಮಲಿಂಗ ರಾಜು ಮತ್ತು ಅವರ ಸಹೋದರ ರಾಜು ಅವರಿಗೆ ವೈಯಕ್ತಿಕ ರು. 1 ಲಕ್ಷ ಬಾಂಡ್ ಮತ್ತು ಇತರ 8 ಜನ ಆರೋಪಿಗಗಳಿಗೆ ತಲಾ ರು. 5,000 ಬಾಂಡ್ ವಿಧಿಸಿ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಸತ್ಯಂ ಕಂಪ್ಯೂಟರ್ ಹಗರಣದ ತೀರ್ಪು ಏಪ್ರಿಲ್ 9ನೇ ತಾರೀಖಿಗೆ ಹೊರಬಿದ್ದಿದ್ದು, ರಾಮಲಿಂಗ ರಾಜು ಹಾಗೂ ಅವರ ಸಹೋದರ, ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಮರಾಜು ಮತ್ತು ಇತರೆ 8 ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಅಂದು ತೀರ್ಪು ಪ್ರಕಟಿಸಿದಾಗ ನ್ಯಾಯಾಲಯ ಈ ಸೋದರರಿಗೆ ಬರೋಬ್ಬರಿ 5.5 ಕೋಟಿ ರೂ. ದಂಡ ಹೇರಿ, ಇನ್ನಿತರೆ 8 ಅಪರಾಧಿಗಳಿಗೆ ತಲಾ 25 ಲಕ್ಷ ರೂ. ದಂಡ ವಿಧಿಸಲಾಗಿತ್ತು.
ಈಗಾಗಲೇ 32 ತಿಂಗಳುಗಳನ್ನು ರಾಮಲಿಂಗ ರಾಜು ಜೈಲಿನಲ್ಲಿ ಕಳೆದಿದ್ದಾರೆ. ಹೀಗಾಗಿ ಇನ್ನೂ 52 ತಿಂಗಳುಗಳನ್ನು ಅವರು ಕಾರಾಗೃಹದಲ್ಲಿ ಸವೆಸಬೇಕಿತ್ತು. ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ರಾಮಲಿಂಗ ರಾಜು ಹಾಗೂ ಇತರೆ 9 ಅಪರಾಧಿಗಳನ್ನು ಸಿಬಿಐ ಪೊಲೀಸರು ವಶಕ್ಕೆ ಪಡೆದು, ಜೈಲಿಗೆ ಕಳುಹಿಸಿದ್ದರು.
ಏನಿದು ಸತ್ಯಂ ಕಂಪ್ಯೂಟರ್ ಹಗರಣ?
ಹಲವು ವರ್ಷಗಳ ಕಾಲ ಸುಳ್ಳು ಲೆಕ್ಕ ಸೃಷ್ಟಿಸಿ ಸತ್ಯಂ ಕಂಪ್ಯೂಟರ್ ಕಂಪನಿಗೆ ಹೆಚ್ಚು ಲಾಭ ಬರುತ್ತಿರುವಂತೆ ರಾಮಲಿಂಗರಾಜು ಹಾಗೂ ಅವರ ಸೋದರರು ಇತರರ ಜತೆಗೂಡಿ ತೋರಿಸಿದ್ದರು. ಈ ವಿಚಾರವನ್ನು 2009ರ ಜ.7ರಂದು ಸ್ವತಃ ರಾಮಲಿಂಗರಾಜು ಒಪ್ಪಿಕೊಳ್ಳುವುದರೊಂದಿಗೆ ಹಗರಣ ಬೆಳಕಿಗೆ ಬಂದಿತ್ತು. ಹಗರಣದ ಬಳಿಕ ಸತ್ಯಂ ಕಂಪನಿಯನ್ನು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ಮಾಲೀಕತ್ವದ ಟೆಕ್ ಮಹೀಂದ್ರಾ ಕಂಪನಿ 2009ರ ಏಪ್ರಿಲ್‌ನಲ್ಲಿ ಖರೀದಿಸಿತ್ತು.
Advertisement