

ವಾಷಿಂಗ್ಟನ್: ಅಮೆರಿಕದಲ್ಲಿರುವವರೂ ಇನ್ನು ಮುಂದೆ ಹಿಂದಿ ಭಾಷೆ ಕಲಿಯಲು ಅವಕಾಶ ಉಂಟು.
ಮುಂದಿನ ಶೈಕ್ಷಣಿಕ ವರ್ಷದಿಂದ ಮೋಂಟಾನದ ವಿಶ್ವವಿದ್ಯಾನಿಲಯವು ಭಾರತದ ರಾಷ್ಟ್ರ ಭಾಷೆಯನ್ನು ಕಲಿಸಲಿದೆ. ವಿಶ್ವವಿದ್ಯಾನಿಲಯದಲ್ಲಿ 2015-16ನೇ ಸಾಲಿನಲ್ಲಿ ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ಅಧ್ಯಯನ ಕಾರ್ಯಕ್ರಮದಲ್ಲಿ ಹಿಂದಿ ಕಲಿಕೆ ತರಗತಿ ಹಮ್ಮಿಕೊಳ್ಳಲಾಗಿದೆ.
ಭಾರತ ಮೂಲದ ಗೌರವ್ ಮಿಶ್ರಾ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ, ಹಿಂದಿಯನ್ನು ಸಾಮಾನ್ಯ ಶೈಕ್ಷಣಿಕ ಭಾಷೆಯಾಗಿ ಆಯ್ಕೆ ಮಾಡಲು ಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.