ಹೆಚ್ಚು ಬದಲಾಗಿಲ್ಲ ಕ್ಯಾಮರೂನ್ ಸಂಪುಟ

ಎರಡನೇ ಬಾರಿಗೆ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಡೇವಿಡ್ ಕ್ಯಾಮರೂನ್ ತಮ್ಮ ಹಳೆಯ ಸಂಪುಟವನ್ನೇ ಉಳಿಸಿಕೊಂಡಿದ್ದಾರೆ.
ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್
ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್

ಲಂಡನ್: ಎರಡನೇ ಬಾರಿಗೆ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಡೇವಿಡ್ ಕ್ಯಾಮರೂನ್ ತಮ್ಮ ಹಳೆಯ ಸಂಪುಟವನ್ನೇ ಉಳಿಸಿಕೊಂಡಿದ್ದಾರೆ.

ಹಣಕಾಸು, ಗೃಹ ಮತ್ತು ವಿದೇಶಾಂಗ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಾರ್ಜ್ ಒಸ್ಬೋರ್ನ್ ಗೃಹ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಕ್ಯಾಮರೂನ್‍ರ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಭಾರತೀಯ ಮೂಲದ ಪ್ರೀತಿ ಪಟೇಲ್‍ಗೆ ಈ ಬಾರಿ ಪದೋನ್ನತಿ ಸಿಗುವ ಸಾಧ್ಯತೆ ಇದೆ.

ಇದರ ಜತೆಗೆ ಇನ್ ಫೋಸಿಸ್ ಸಂಸ್ಥಾಪಕ ರಿಶಿ ಸುನಕ್‍ಗೆ ಕೂಡ ಸ್ಥಾನ ಪಡೆಯುವ ಸಾಧ್ಯತೆ ಅಧಿಕವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹತ್ತು ಮಂದಿ ಭಾರತೀಯ ಮೂಲದ ನಾಗರಿಕರು ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬ್ರಿಟನ್ ಕಾನೂನಿನ ಪ್ರಕಾರ 109 ಮಂದಿಯನ್ನು ಸಚಿವರಾಗಿ ನೇಮಿಸಿಕೊಳ್ಳಲು ಅವಕಾಶ ಉಂಟು. ಪ್ರಸಕ್ತ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದಿರುವ ಕ್ಯಾಮರೂನ್‍ರ ಕನ್ಸರ್ವೇಟಿವ್ ಪಕ್ಷ, ಹಿಂದಿನ ಮೈತ್ರಿ ಪಕ್ಷ ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ಸಂಸದರನ್ನು ಸಂಪುಟಕ್ಕೆ ನೇಮಿಸದಿರಲು ಕ್ಯಾಮರೂನ್ ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com