ವಿರೋಧದ ನಡುವೆಯೂ ಭೂ ವಿಧೇಯಕ ಮಂಡನೆ

ಪ್ರತಿಪಕ್ಷಗಳ ಭಾರಿ ಪ್ರತಿಭಟನೆ, ಸಭಾತ್ಯಾಗದ ನಡುವೆ ಸೋಮವಾರ ವಿವಾದಾತ್ಮಕ ಭೂಸ್ವಾಧೀನ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
ಲೋಕಸಭಾ ಕಲಾಪ
ಲೋಕಸಭಾ ಕಲಾಪ
Updated on

ನವದೆಹಲಿ: ಪ್ರತಿಪಕ್ಷಗಳ ಭಾರಿ ಪ್ರತಿಭಟನೆ, ಸಭಾತ್ಯಾಗದ ನಡುವೆ/s ಸೋಮವಾರ ವಿವಾದಾತ್ಮಕ ಭೂಸ್ವಾಧೀನ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

ರಾಜ್ಯಸಭೆಯಲ್ಲೂ ಇದೇ ಮಾದರಿಯ ವಿಧೇಯಕ ಅಂಗೀಕಾರವಾಗದೆ ಬಾಕಿ ಉಳಿದಿದೆ ಎಂಬ ಪ್ರತಿಪಕ್ಷಗಳ ವಾದವನ್ನು ತಿರಸ್ಕರಿಸಿದ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ವಿಧೇಯಕದ ಮಂಡನೆಯನ್ನು ಮತಕ್ಕೆ ಹಾಕಲು ನಿರ್ಧರಿಸಿದರು. ಆದರೆ ಇದಕ್ಕೆ ಒಪ್ಪದ ಕಾಂಗ್ರೆಸ್, ಟಿಎಂಸಿ, ಆಪ್ ಮತ್ತು ಎಡಪಕ್ಷಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದವು. ಈ ವೇಳೆ ಕೆಲವರು ಸರ್ಕಾರದ ವಿಧೇಯಕದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಪ್ರತಿಪಕ್ಷಗಳ ಸಭಾತ್ಯಾಗದ ಬಳಿಕ ವಿಧೇಯಕವನ್ನು ಮಂಡಿಸಲಾಯಿತು. ಈವರೆಗೆ ಭೂಸ್ವಾಧೀನ ವಿಧೇಯಕಕ್ಕೆ ಸಂಬಂಧಿಸಿ ಸರ್ಕಾರ ಎರಡು ಬಾರಿ ಸುಗ್ರೀವಾಜ್ಞೆ ಹೊರಡಿಸಿದೆ.

ಮಾಹಿತಿದಾರರ ರಕ್ಷಣೆ ವಿಧೇಯಕ ಮಂಡನೆ
ಮಾಹಿತಿದಾರರ ರಕ್ಷಣೆ ಕಾಯ್ದೆ 2011ರ ತಿದ್ದುಪಡಿ ವಿಧೇಯಕವನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ವಿಧೇಯಕಕ್ಕೆ ಮೇ 2014ರಲ್ಲೇ ರಾಷ್ಟ್ರಪತಿಯ ಒಪ್ಪಿಗೆ ಸಿಕ್ಕಿದರೂ, ಸರ್ಕಾರ ಅದನ್ನು ಮಂಡಿಸುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂ„ಸಿದ ಅಂಶಗಳನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ಉದ್ದೇಶದಿಂದ ಇದಕ್ಕೆ ತಿದ್ದುಪಡಿ ತರಲಾಗಿದೆ. ಆದರೆ, ಕೆಲವು ಹೋರಾಟಗಾರರು ಜಂಟಿ ಸಮಿತಿಗೆ ಭೂಸ್ವಾಧೀನ ವಿಧೇಯಕ ಕೇಂದ್ರ ಸರ್ಕಾರದ ಕೆಲವೊಂದು ಸುಧಾರಣಾ ವಿಧೇಯಕಗಳಿಗೆ ಸಂಬಂಧಿಸಿ ರಾಜ್ಯಸಭೆಯಲ್ಲಿ ಒಮ್ಮತ ಮೂಡುವ ಲಕ್ಷಣ ಕಾಣುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಸರ್ಕಾರವು ಭೂಸ್ವಾಧೀನ ವಿಧೇಯಕವನ್ನು ಎರಡೂ ಸದನಗಳ ಜಂಟಿ ಸಮಿತಿಗೆ ಮತ್ತು ಜಿಎಸ್‍ಟಿ ವಿಧೇಯಕವನ್ನು ರಾಜ್ಯಸಭೆಯ ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಿದೆ. ಭೂಸ್ವಾಧೀನ ವಿಧೇಯಕವನ್ನು 30 ಸದಸ್ಯರ ಜಂಟಿ ಸಮಿತಿಯು ಪರಿಶೀಲನೆ ನಡೆಸಲಿದ್ದು, ಬಿಜೆಪಿ ಸದಸ್ಯ ಎಸ್.ಎಸ್. ಅಹ್ಲುವಾಲಿಯಾ ಅವರು ಸಮಿತಿಯ ನೇತೃತ್ವ ವಹಿಸಿದ್ದಾರೆ. ಇದೇ ವೇಳೆ, ಜಿಎಸ್‍ಟಿ ವಿಧೇಯಕವನ್ನು ಪರಿಶೀಲಿಸಲಿರುವ ಸಮಿತಿಯಲ್ಲಿ 15 ಅಥವಾ 21 ಸದಸ್ಯರಿರಲಿದ್ದಾರೆ.

ಕಪ್ಪುಹಣ ವಿಧೇಯಕಕ್ಕೆ ಲೋಕಸಭೆ ಅಸ್ತು
ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣ ಇಡುವವರಿಗೆ ಭಾರಿ ದಂಡ ವಿಧಿಸುವಂತಹ `ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ ವಿಧೇಯಕ' ಸೋಮವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಮಾರ್ಚ್‍ನಲ್ಲಿ ಸರ್ಕಾರ ಈ ವಿಧೇಯಕವನ್ನು ಮಂಡಿಸಿತ್ತು. ಯಾರ್ಯಾರು ವಿದೇಶಗಳಲ್ಲಿ ಹಣವಿಟ್ಟಿದ್ದಾರೋ ಅವರಿಗೆ ತಮ್ಮ ಹಣದ ಬಗ್ಗೆ ಮಾಹಿತಿ ನೀಡುವ, ಅದಕ್ಕೆ ತೆರಿಗೆ, ಬಡ್ಡಿ ಮತ್ತು ದಂಡ ವಿಧಿಸುವ ಅವಕಾಶವನ್ನು ಈ ವಿಧೇಯಕ ನೀಡುತ್ತದೆ. ಯಾರು ಇದನ್ನು ಅನುಸರಿಸುವುದಿಲ್ಲವೋ ಅಂಥವರಿಗೆ 3-10 ವರ್ಷ ಜೈಲು ಸೇರಿದಂತೆ ಕಠಿಣ ಶಿಕ್ಷೆ ವಿಧಿಸುವ ನಿಬಂಧನೆಯೂ ಇದರಲ್ಲಿದೆ.

ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ರಾಜಕೀಯ ದಾಳಿಗಳು ನಡೆಸುತ್ತಲೇ ಇದ್ದರೆ, ನಾವು ಸುಮ್ಮನಿರುವುದಿಲ್ಲ. ನಾವೇನೂ ವಿಧೇಯಕವನ್ನು ಹೇರಲು ಹೊರಟಿಲ್ಲ. ವಿಧೇಯಕದಲ್ಲಿ ಕೆಲ ಸಲಹೆಗಳನ್ನು ಅಳವಡಿಸಿದ್ದೇವೆ.
-ಎಂ. ವೆಂಕಯ್ಯ ನಾಯ್ಡು
ಸಂಸದೀಯ ವ್ಯವಹಾರಗಳ ಸಚಿವ


ಸ್ಪೀಕರ್ ಗೆ ವಿವೇಚನಾಧಿಕಾರ ಇದೆ. ಆದರೆ ಆ ಅಧಿಕಾರವನ್ನು ನ್ಯಾಯಸಮ್ಮತವಾಗಿ ಬಳಸಬೇಕು. ಸರ್ಕಾರವು ಬಂಡವಾಳಶಾಹಿಗಳು ಮತ್ತು ಕಾರ್ಪೊರೇಟ್‍ಗಳ ಹಿತವನ್ನು
ಕಾಪಾಡುತ್ತಿದೆಂಯೇ ವಿನಾಃ ರೈತರ ಹಿತವನ್ನಲ್ಲ. ಹಾಗಾಗಿ ವಿಧೇಯಕದ ಮಂಡನೆಗೆ ಅವರು ಅವಕಾಶ ನೀಡಬಾರದು.
- ಮಲ್ಲಿಕಾರ್ಜುನ ಖರ್ಗೆ
ಲೋಕಸಭೆ ಕಾಂಗ್ರೆಸ್ ನಾಯಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com