ಚೆನ್ನೈ
ದೇಶ
ಚೆನ್ನೈಯಲ್ಲೂ ಲಘು ಭೂಕಂಪ
ನೇಪಾಳದಲ್ಲಿ ಮಂಗಳವಾರ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಚೆನ್ನೈನ ಕೆಲವು ಭಾಗಗಳಲ್ಲಿ ಲಘು ಭೂಕಂಪವಾಗಿದೆ ಎಂದು...
ಚೆನ್ನೈ: ನೇಪಾಳದಲ್ಲಿ ಮಂಗಳವಾರ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಚೆನ್ನೈನ ಕೆಲವು ಭಾಗಗಳಲ್ಲಿ ಲಘು ಭೂಕಂಪವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಲಸರವಾಕ್ಕಂ, ಸ್ಯಾಂತೋಮ್ ಮತ್ತು ಕೊಡಂಬಾಕಂನ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ಅವರು ತಿಳಿಸಿದ್ದಾರೆ.
ಲಘು ಭೂಕಂಪ ಸಂಭವಿಸಿದ್ದರಿಂದ ಆತಂಕಗೊಂಡ ಜನ ತಮ್ಮ ಮನೆಗಳಿಂದ ಸುರಕ್ಷಿತ ಸ್ಥಳಕ್ಕೆ ಓಡಿದರು. ಲಘು ಭೂಕಂಪದಿಂದ ಚೆನ್ನೈನಲ್ಲಿ ಯಾವುದೇ ಆಸ್ತಿ ಅಥವಾ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ನೇಪಾಳದಲ್ಲಿ 7.2 ತೀವ್ರತೆಗೆ ಭೂಕಂಪ ಸಂಭವಿಸಿದ್ದು, ಅದರ ಬಿಸಿ ಉತ್ತರ ಭಾರತ ಹಾಗೂ ಚೆನ್ನೈಗೂ ತಟ್ಟಿದೆ.

