ಅಮೆರಿಕದಲ್ಲಿ ಹಳಿ ತಪ್ಪಿದ ರೈಲು: 5 ಸಾವು

ಅಮೆರಿಕದಲ್ಲಿ ಅಮ್ ಟ್ರಾಕ್ ಲೋಕಲ್ ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು ಸುಮಾರು 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಹಳಿ ತಪ್ಪಿದ ಲೋಕಲ್ ರೈಲು
ಹಳಿ ತಪ್ಪಿದ ಲೋಕಲ್ ರೈಲು

ಫಿಲಿಡೆಲ್ಫಿಯಾ: ಅಮೆರಿಕದಲ್ಲಿ ಅಮ್ ಟ್ರಾಕ್ ಲೋಕಲ್ ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು ಸುಮಾರು 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ಸುಮಾರು 7.10ರ ವೇಳೆಯಲ್ಲಿ ಅಮೆರಿಕದ ವಾಷಿಂಗ್ ಟನ್ ನಿಂದ ನ್ಯೂಯಾರ್ಕ್ ಗೆ ತೆರಳುತ್ತಿದ್ದ  ರೈಲು ಸಂಖ್ಯೆ 188ರ ಅ್ಯಮ್ ಟ್ರಾಕ್ ಲೋಕಲ್ ರೈಲು ಫಿಲಿಡೆಲ್ಫಿಯಾ ಬಳಿ ಹಳಿ ತಪ್ಪಿದೆ. ಘಟನೆಯಲ್ಲಿ ಸುಮಾರು 5 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಈ ಪೈಕಿ ಆರು ಮಂದಿ ಪ್ರಯಾಣಿಕರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನು ದುರಂತಕ್ಕೀಡಾದ ರೈಲಿನಲ್ಲಿ ಸುಮಾರು 238 ಪ್ರಯಾಣಿಕರು ಮತ್ತು ಐದು ರೈಲು ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ರೈಲ್ವೇ ರಕ್ಷಣಾಪಡೆಗಳು ದೌಡಾಯಿಸಿವೆ. ಅಪಘಾತದ ಸಂದರ್ಭದಲ್ಲಿ ರೈಲು ಸುಮಾರು ಪ್ರತೀ ಗಂಟೆಗೆ ನೂರು ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಈ ವೇಳೆ ತಿರುವಿನಲ್ಲಿ ರೈಲು ಹಳಿ ತಪ್ಪಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ರೈಲು ಹಳಿ ತಪ್ಪಿದ ಪರಿಣಾಮ ಬೋಗಿಗಳು ಸುಮಾರು ಮೀಟರ್ ಗಳ ವರೆಗೆ ಉರುಳಿಕೊಂಡು ಹೋಗಿರುವುದು ಕಂಡುಬಂದಿದೆ. ಗಾಯಾಳುಗಳನ್ನು ಏರ್ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com