ಗೂಗಲ್ ಮ್ಯಾಪ್‌ನಲ್ಲಿ ಸಿಗಲಿದೆ ಭಾರತೀಯ ರೈಲ್ವೇ ವೇಳಾಪಟ್ಟಿ

ಗೂಗಲ್ ಮ್ಯಾಪ್ಸ್‌ನ ಗೂಗಲ್ ಟ್ರಾನ್ಸಿಟ್‌ನಲ್ಲಿ ಇನ್ಮುಂದೆ ಭಾರತೀಯ ರೈಲ್ವೇ ವೇಳಾಪಟ್ಟಿ ಲಭ್ಯವಾಗಲಿದೆ. ಇದರ ಜತೆಗೆ ಭಾರತದ ಎಂಟು...
ಭಾರತೀಯ ರೈಲ್ವೇ
ಭಾರತೀಯ ರೈಲ್ವೇ

ಮುಂಬೈ:  ಗೂಗಲ್ ಮ್ಯಾಪ್ಸ್‌ನ  ಗೂಗಲ್ ಟ್ರಾನ್ಸಿಟ್‌ನಲ್ಲಿ ಇನ್ಮುಂದೆ ಭಾರತೀಯ ರೈಲ್ವೇ ವೇಳಾಪಟ್ಟಿ ಲಭ್ಯವಾಗಲಿದೆ. ಇದರ ಜತೆಗೆ ಭಾರತದ ಎಂಟು ಮಹಾನಗರಗಳ ಸಾರ್ವಜನಿಕ ಸಾರಿಗೆಯ ಪರಿಷ್ಕೃತ ಮಾಹಿತಿ ಆ್ಯಪ್‌ನಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ಗೂಗಲ್ ಮ್ಯಾಪ್‌ನಲ್ಲಿರುವ ಗೂಗಲ್ ಟ್ರಾನ್ಸಿಟ್ ಎಂಬ ಫೀಚರ್, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಮುನ್ನ ಮಾಡಬೇಕಾಗಿರುವ ಯೋಜನೆಗಳಿಗೆ ಸಲಹೆ ನೀಡುತ್ತದೆ. ಆ್ಯಂಡ್ರಾಯ್ಡ್ ಅಥವಾ ಐಓಎಸ್ ಡಿವೈಸ್‌ಗಳಲ್ಲಿ ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ಗೂಗಲ್ ಮ್ಯಾಪ್ ಆ್ಯಪ್ ಇದ್ದರೆ ಈ ಸೌಲಭ್ಯ ಪಡೆಯಬಹುದು.

ಸದ್ಯಕ್ಕೀಗ ಇದರಲ್ಲಿ 12,000 ರೈಲುಗಳ ಮಾಹಿತಿ ಮತ್ತು ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಹೈದ್ರಾಬಾದ್,  ಕೊಲ್ಕತ್ತಾ, ಮುಂಬೈ, ನವದೆಹಲಿ, ಪುಣೆ ಮೊದಲಾದ ನಗರಗಳಲ್ಲಿನ ಮೆಟ್ರೋ ಮತ್ತು ಬಸ್ ರೂಟ್‌ಗಳ ಮಾಹಿತಿ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com