ಗಂಗಾನದಿ ಶುದ್ಧೀಕರಣಕ್ಕೆ 20 ಸಾವಿರ ಕೋಟಿ ಹಣ: ಕೇಂದ್ರ ಸಂಪುಟ ಸಭೆ ತೀರ್ಮಾನ

ಕೇಂದ್ರ ಎನ್ ಡಿ ಎ ಸರ್ಕಾರದ ಮಹತ್ವಾಕಾಂಕ್ಷೆಯ ಗಂಗಾ ನದಿ ಶುದ್ಧೀಕರಣ ಯೋಜನೆಗೆ ಸರ್ಕಾರ 20 ಸಾವಿರ ಕೋಟಿ ಮೀಸಲಿಡಲು ನಿರ್ಧರಿಸಿದೆ.
ಗಂಗಾನದಿ
ಗಂಗಾನದಿ

ನವದೆಹಲಿ: ಕೇಂದ್ರ ಎನ್ ಡಿ ಎ ಸರ್ಕಾರದ ಮಹತ್ವಾಕಾಂಕ್ಷೆಯ ಗಂಗಾ ನದಿ ಶುದ್ಧೀಕರಣ ಯೋಜನೆಗೆ ಸರ್ಕಾರ 20 ಸಾವಿರ ಕೋಟಿ ಮೀಸಲಿಡಲು ನಿರ್ಧರಿಸಿದೆ. ದೇಶದ ಅತಿ ದೊಡ್ಡ ಹಾಗೂ ಪವಿತ್ರ ನದಿಗಳಲ್ಲಿ ಒಂದಾಗಿರುವ ಗಂಗಾ ನದಿ ಶುದ್ಧೀಕರಣಕ್ಕೆ ಮುಂದಿನ 5 ವರ್ಷಗಳಲ್ಲಿ 20 ಸಾವಿರ ಕೋಟಿ ವೆಚ್ಚ ಮಾಡಲು ಸರ್ಕಾರ ನಿರ್ಧರಿಸಿದೆ.

ನಮಗಾಗಿ ಗಂಗಾ ಎಂಬ ಕಾರ್ಯಕ್ರಮಕ್ಕೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಗಂಗಾ ನದಿ ಶುದ್ಧೀಕರಣಕ್ಕೆ 20 ಸಾವಿರ ಕೋಟಿ ಹಣ ಬಿಡುಗಡೆ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕಳೆದ ವರ್ಷ ಬಜೆಟ್ ನಲ್ಲಿ ಮೋದಿ ಸರ್ಕಾರ ಗಂಗಾನದಿ ಶುದ್ಧೀಕರಣಕ್ಕಾಗಿ 2037 ಕೋಟೀ ಹಣ ಬಿಡುಗಡೆ ಮಾಡಿತ್ತು. ರಾಷ್ಟ್ರೀಯ ಗಂಗಾನದಿ ಜಲಾನಯನ ಪ್ರಾಧಿಕಾರ, ಜಲ ಸಂಪನ್ಮೂಲ ಹಾಗೂ ನದಿ ಅಭಿವೃದ್ಧಿ ಸಚಿವಾಲಯ, ಗಳ ಸಹಯೋಗದಲ್ಲಿ ನಮಗಾಗಿ ಗಂಗಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಒಟ್ಟಾರೆ ಗಂಗಾನದಿಯ ಶುದ್ಧೀಕರಣಕ್ಕೆ ಹೆಚ್ಚಿನ ಹಣದ ಅವಶ್ಯಕತೆಯಿರುವುದನ್ನು ಮನಗಂಡ ಕೇಂದ್ರ ಸರ್ಕಾರ 20 ಸಾವಿರ ಕೋಟಿ ನೀಡಲು ಒಪ್ಪಿಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com