ಮಹಿಳಾ ಅಥ್ಲೀಟ್ಸ್ ಆತ್ಮಹತ್ಯೆ ಪ್ರಕರಣ: ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿದ ಭಾರತೀಯ ಕ್ರೀಡಾ ಪ್ರಾಧಿಕಾರ

ಕೇರಳದ ಅಲಪುಝಾ ದಲ್ಲಿ ಇತ್ತೀಚೀಗೆ ನಡೆದಿದ್ದ ಮಹಿಳಾ ಅಥ್ಲೀಟ್ಸ್ ಗಳ ಆತ್ಮಹತ್ಯೆ ಪ್ರಕರಣ ಸಂಬಂಧ ಅಧಿಕಾರಿಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಕ್ಲೀನ್ ಚಿಟ್ ನೀಡಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ
ಭಾರತೀಯ ಕ್ರೀಡಾ ಪ್ರಾಧಿಕಾರ

ನವದೆಹಲಿ: ಕೇರಳದ ಅಲಪುಝಾ ದಲ್ಲಿ ಇತ್ತೀಚೀಗೆ ನಡೆದಿದ್ದ ಮಹಿಳಾ ಅಥ್ಲೀಟ್ಸ್ ಗಳ ಆತ್ಮಹತ್ಯೆ ಪ್ರಕರಣ ಸಂಬಂಧ ಅಧಿಕಾರಿಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಕ್ಲೀನ್ ಚಿಟ್ ನೀಡಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕ ಇಂಜೆತಿ ಶ್ರೀನಿವಾಸ್, ವಾರ್ಡನ್ ಶ್ರೀಕಲಾ, ಹಾಸ್ಟೆಲ್ ನ ಹಿರಿಯ ಆಟಗಾರರರಿಗೂ, ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು  ಕ್ಲೀನ್ ಚಿಟ್ ನೀಡಿ, ವರದಿಯನ್ನೂ ಕ್ರೀಡಾಸ ಸಚಿವಾಲಯಕ್ಕೆ ರವಾನಿಸಿದ್ದಾರೆ.
ಪ್ರಕರಣ ಸಂಬಂದ ತನಿಖೆ ನಡೆಸಿದಾಗ ನಾಲ್ವರು ಅಥ್ಲೀಟ್ ಗಳು ಆತ್ಮಹತ್ಯೆಗೆ ಯತ್ನಿಸುವ ನಾಲ್ಕೈದು ದಿನಗಳ ಹಿಂದೆಯಷ್ಟೇ ಮದುವೆ ಸಮಾರಂಭವೊಂದಕ್ಕೆ ತೆರಳಿ ಅಲ್ಲಿ ಮದ್ಯಪಾನ ಮಾಡಿದ್ದರು. ಇದನ್ನು ಗಮನಿಸಿದ ಸೀನಿಯರ್ ಅಥ್ಲೀಟ್ಸ್ ಮಧ್ಯಪಾನ ಮಾಡುವುದರಿಂದ ಕ್ರೀಡಾ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಕುಡಿಯಬಾರದೆಂದು ಎಚ್ಚರಿಕೆ ನೀಡಿದ್ದರು. ಅವರಿಗೆ ಕಿರುಕುಳ ನೀಡುವ ಉದ್ದೇಶವಿರಲಿಲ್ಲ. ಈ ವಿಷಯ ಹಾಸ್ಟೆಲ್ ವಾರ್ಡನ್ ಶ್ರೀಕಲಾ ಅವರಿಗೆ ತಿಳಿದು, ಕುಡಿಯದಂತೆ ಎಚ್ಚರಿಕೆ ನೀಡಿದ್ದರು. ಜೊತೆಗೆ ಮುಂದೆ ಪುನರಾವರ್ತನೆ ಆದರೆ ಪೋಷಕರಿಗೆ ತಿಳಿಸುವುದಾಗಿ ಎಚ್ಚರಿಸಿದ್ದರು. ಒಬ್ಬ ತಾಯಿಯ ಕಳಕಳಿಯಿಂದ ಅವರು ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ವಾರ ಕೇರಳದ ಹಾಸ್ಟೆಲ್ ನಲ್ಲಿ ನಾಲ್ವರು ಮಹಿಳಾ ಅಥ್ಲೀಟ್ ಗಳು ಒಕಲಂಗಾ ಎಂಬ ವಿಷಪೂರಿತ ಹಣ್ಣು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅದರಲ್ಲಿ ಓರ್ವ ಮಹಿಳಾ ಅಥ್ಲೀಟ್ ಸಾವನ್ನಪ್ಪಿ, ಉಳಿದ ಮೂವರು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಸತ್ ನಲ್ಲೂ ಪ್ರತಿಧ್ವನಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com