ಭಾರತದ 37 ಮೀನುಗಾರರ ಬಿಡುಗಡೆಗೆ ಶ್ರೀಲಂಕಾ ಆದೇಶ

ಶ್ರೀಲಂಕಾದ ವಿವಿಧ ಭಾಗಗಳಲ್ಲಿ ಜೈಲುವಾಸ ಅನುಭವಿಸುತ್ತಿರುವ ಭಾರತದ 37 ಮೀನುಗಾರರನ್ನು ಬಿಡುಗಡೆ ಮಾಡಲು ಶ್ರೀಲಂಕಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲಂಬೊ: ಶ್ರೀಲಂಕಾದ ವಿವಿಧ ಭಾಗಗಳಲ್ಲಿ ಜೈಲುವಾಸ ಅನುಭವಿಸುತ್ತಿರುವ ಭಾರತದ 37 ಮೀನುಗಾರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಆದೇಶ ನೀಡಿದ್ದಾರೆ.

ರಾಮೇಶ್ವರಂ ನ ಮೀನುಗಾರರ ಸಂಘದ ಅಧ್ಯಕ್ಷ ಟಿ. ಸೇಸುರಾಜ ನೇತೃತ್ವದ 5 ಸದಸ್ಯರಿದ್ದ ನಿಯೋಗದೊಂದಿಗೆ ಮಾತುಕತೆ ನಡೆಸಿದ ಬಳಿಕ ಶ್ರೀಲಂಕಾ ಅಧ್ಯಕ್ಷರು ಈ ಆದೇಶ ಪ್ರಕಟಿಸಿದ್ದಾರೆ.

ಮೀನುಗಾರರ ಬಿಡುಗಡೆಗೆ ಆದೇಶ ನೀಡಲಾಗಿದೆಯಾದರೂ ಬಿಡುಗಡೆಯ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ, ಬಂಧಿತ ಮೀನುಗಾರರು ಬಳಸುತ್ತಿದ್ದ ಬೋಟ್ ಗಳನ್ನು ಬಿಡುಗಡೆ ಮಾಡುವ ಬಗ್ಗೆಯೂ ಮಾಹಿತಿ ಸ್ಪಷ್ಟವಾಗಿಲ್ಲ.

ಲಂಕಾ ಅಧ್ಯಕ್ಷರೊಂದಿಗೆ ನಡೆದ ಚರ್ಚೆ ಬಗ್ಗೆ ವಿವರಣೆ ನೀಡಿರುವ ರಾಮೇಶ್ವರಂ ನ ಮೀನುಗಾರರ ಸಂಘದ ಅಧ್ಯಕ್ಷ ಸೇಸುರಾಜ, ಮೀನುಗಾರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಆದೇಶ ನೀಡಿದ್ದಾರೆ. ಆದರೆ ಬಂಧಿತ ಮೀನುಗಾರರಿಂದ ವಶಪಡಿಸಿಕೊಳ್ಳಲಾಗಿರುವ ದೋಣಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಲಂಕಾ ಅಧ್ಯಕ್ಷರು ಆದೇಶದಲ್ಲಿ ಪ್ರಸ್ತಾಪಿಸಿಲ್ಲ ಎಂದಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ಪಾಲ್ಕ್ ಸ್ಟ್ರೇಟ್‌ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರನ್ನು ಶ್ರೀಲಂಕಾ ನೌಕಾಪಡೆ ಪದೇ ಪದೇ ಬಂಧಿಸುತ್ತಿದ್ದ ಹಿನ್ನೆಲೆಯಲ್ಲಿ, ಪಾಲ್ಕ್ ಸ್ಟ್ರೇಟ್‌ನಲ್ಲಿ ತಮಿಳುನಾಡಿನ ಮೀನುಗಾರರು ಮೀನುಗಾರಿಕೆ ನಡೆಸಲು ಅನುಮತಿ ಪಡೆದಿರುವುದಾಗಿ ನಿಯೋಗದಲ್ಲಿದ್ದ ಸದಸ್ಯ ಎನ್ ದೇವದಾಸ್ ತಿಳಿಸಿದ್ದಾರೆ.

ಪಾಲ್ಕ್ ಸ್ಟ್ರೇಟ್‌ ನಲ್ಲಿ ತಮಿಳುನಾಡಿನ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರನ್ನು ಭೇಟಿ ಮಾಡಿರುವುದಾಗಿ ಸೇಸುರಾಜ ತಿಳಿಸಿದ್ದಾರೆ.  ಶ್ರೀಲಂಕಾ ಹಾಗೂ ತಮಿಳುನಾಡಿನ ಮೀನುಗಾರ ನಡುವಿನ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com