ರಾಜಕೀಯ ಸಹಾಯವಿಲ್ಲದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ: ಶಂಕರಾಚಾರ್ಯ

ರಾಜಕೀಯ ಬೆಂಬಲ ಹಾಗೂ ಸಹಾಯವಿಲ್ಲದೆಯೇ ರಾಮ ಹುಟ್ಟಿದ ಸ್ಥಳವಾದ ಅಯೋಧ್ಯೆಯಲ್ಲಿ ರಾಮದೇಗುಲವನ್ನು ನಿರ್ಮಿಸುತ್ತೇವೆ ಎಂದು ಶಂಕರಾಚಾರ್ಯ ಸ್ವರೂಪನಂದ ಸರಸ್ವತಿ ಸ್ವಾಮೀಜಿ ಬುಧವಾರ ಹೇಳಿದ್ದಾರೆ...
ಶಂಕರಾಚಾರ್ಯ ಸ್ವರೂಪನಂದ ಸರಸ್ವತಿ ಸ್ವಾಮೀಜಿ
ಶಂಕರಾಚಾರ್ಯ ಸ್ವರೂಪನಂದ ಸರಸ್ವತಿ ಸ್ವಾಮೀಜಿ

ನವದೆಹಲಿ: ರಾಜಕೀಯ ಬೆಂಬಲ ಹಾಗೂ ಸಹಾಯವಿಲ್ಲದೆಯೇ ರಾಮ ಹುಟ್ಟಿದ ಸ್ಥಳವಾದ ಅಯೋಧ್ಯೆಯಲ್ಲಿ ರಾಮದೇಗುಲವನ್ನು ನಿರ್ಮಿಸುತ್ತೇವೆ ಎಂದು ಶಂಕರಾಚಾರ್ಯ ಸ್ವರೂಪನಂದ ಸರಸ್ವತಿ ಸ್ವಾಮೀಜಿ ಬುಧವಾರ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ದೇಗುಲ ನಿರ್ಮಾಣ ಕುರಿತಂತೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಇದೆ. ಹೀಗಾಗಿ ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಕಾನೂನು ರೂಪಿಸುವ ನಿಲುವಳಿ ಮಂಡನೆ ಮಾಡುವುದು ಅಸಾಧ್ಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದರು.

ಕೇಂದ್ರ ರಾಜಕೀಯ ವಲಯದಲ್ಲಿ ನಡೆದ ಈ ಬೆಳವಣಿಗೆ ಹಿನ್ನೆಲೆಯಲ್ಲಿ ಇಂದು ರಾಮ್ ಲೀಲಾ ಮೈದಾನದಲ್ಲಿ ಮಾತನಾಡಿರುವ ಶಂಕರಾಚಾರ್ಯ ಸ್ವಾಮೀಜಿ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತಂತೆ ರಾಜಕೀಯ ವ್ಯಕ್ತಿಗಳು ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ರಾಮ ಜನ್ಮ ಭೂಮಿ ಬಗ್ಗೆ ಮಾತನಾಡಬೇಡಿ, ರಾಮ ಮಂದಿರ ನಿರ್ಮಾಣವನ್ನು ನಾವು ಮಾಡುತ್ತೇವೆ.

ಅಯೋಧ್ಯೆ ರಾಮ ಭೂಮಿ, ಹಿಂದೂಗಳ ಸ್ಥಳವೆಂದು ಈಗಾಗಲೇ ಧೃಢೀಕರಣಗೊಂಡಿದೆ. ಇನ್ನೇನಿದ್ದರೂ ಸುಪ್ರೀಂಕೋರ್ಟ್ ಆದೇಶ ನೀಡಬೇಕಷ್ಟೇ. ಸುಪ್ರೀಂಕೋರ್ಟ್ ಆದೇಶ ನೀಡುತ್ತಿದ್ದಂತೆಯೇ ರಾಜಕೀಯ ಬೆಂಬಲ ಹಾಗೂ ಹಣದ ಸಹಾಯವಿಲ್ಲದೆಯೇ, ಜನರ ಸಹಾಯದಿಂದ ನಾವು ರಾಮ ದೇಗುಲವನ್ನು ನಿರ್ಮಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com