ಅಧಿಕಾರವಿಲ್ಲದಿದ್ದಾಗಲೇ ಕಾಂಗ್ರೆಸ್ ಗೆ ರೈತರ ನೆನಪಾಗುವುದು: ಟಿಆರ್ ಎಸ್ ವ್ಯಂಗ್ಯ

ಹಲವು ವರ್ಷಗಳಿಂದ ತೆಲಂಗಾಣ ಮಾತ್ರವಲ್ಲದೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿತ್ತು. ಅಂದು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಗೆ ರೈತರ ನೆನಪಾಗಿರಲಿಲ್ಲ. ಇದೀಗ ಅಧಿಕಾರವಿಲ್ಲದ ಕಾರಣ ಕಾಂಗ್ರೆಸ್ ಗೆ ರೈತರ ನೆನಪಾಗುತ್ತಿದೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ...
ತೆಲಂಗಾಣ ರಾಷ್ಟ್ರೀಯ ಸಮಿತಿಯ ನಾಯಕಿ ಕೆ.ಕವಿತಾ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ತೆಲಂಗಾಣ ರಾಷ್ಟ್ರೀಯ ಸಮಿತಿಯ ನಾಯಕಿ ಕೆ.ಕವಿತಾ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ: ಹಲವು ವರ್ಷಗಳಿಂದ ತೆಲಂಗಾಣ ಮಾತ್ರವಲ್ಲದೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿತ್ತು. ಅಂದು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಗೆ ರೈತರ ನೆನಪಾಗಿರಲಿಲ್ಲ. ಇದೀಗ ಅಧಿಕಾರವಿಲ್ಲದ ಕಾರಣ ಕಾಂಗ್ರೆಸ್ ಗೆ ರೈತರ ನೆನಪಾಗುತ್ತಿದೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ ಕಾಂಗ್ರೆಸ್ ಕುರಿತು ಗುರುವಾರ ವ್ಯಂಗ್ಯವಾಡಿದೆ.

ರೈತರ ಆತ್ಮಹತ್ಯೆ ಹಾಗೂ ಅವರ ಸಮಸ್ಯೆ ದೇಶದ ಸಮಸ್ಯೆಯಾಗಿದೆ. ಈ ಸಮಸ್ಯೆಗಳು ಪ್ರಾದೇಶಿಕ ರೈತರಿಗೆ ಸಾಮಾನ್ಯವಾಗಿ ಹೋಗಿದೆ. ಭಾರತದಲ್ಲಿ ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ರೈತರ ಆತ್ಮಹತ್ಯೆ ಹಾಗೂ ಅವರ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಎಂದಿಗೂ ಮಾಡಿರಲಿಲ್ಲ. ಇದೀಗ ಸೋತು ಸುಣ್ಣವಾಗಿರುವ ಸಂದರ್ಭದಲ್ಲಿ ರೈತರ ಸಮಸ್ಯೆ ಹಿಡಿದು ಸಾಂತ್ವನ, ಪಾದಯಾತ್ರೆಯೆಂದು ಹೇಳುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿಯ ನಾಯಕಿ ಕೆ.ಕವಿತಾ ಹೇಳಿದ್ದಾರೆ.

ತೆಲಂಗಾಣ ರಾಷ್ಟ್ರೀಯ ಪಕ್ಷ ಅಧಿಕಾರಕ್ಕೆ ಬಂದು ಕೇವಲ 1 ವರ್ಷವಾಗಿದೆಯಷ್ಟೇ. ಈ ಅಲ್ಪ ಅವಧಿಯಲ್ಲೇ ರೈತರಿಗೆ ಗೊಬ್ಬರ, ನೀರು, ವಿದ್ಯುತ್ ಸೇರಿದಂತೆ ಸಾಕಷ್ಟು ಅನುಕೂಲಗಳನ್ನು ಮಾಡಿದೆ. ಈ ವಿಷಯದ ಕುರಿತಂತೆ ಚರ್ಚೆಗೆ ಬೇಕಿದ್ದರೂ ನಾವು ತಯಾರಿದ್ದೇವೆ ಎಂದು ಹೇಳಿದ್ದಾರೆ.

ಈ ಹಿಂದೆ ದೇಶದ ನಾನಾ ಕಡೆಗಳಲ್ಲಿ ಅಕಾಲಿಕ ಮಳೆ ಉಂಟು ಮಾಡಿದ ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತ್ರಸ್ಥರಿಗೆ ಸಾಂತ್ವನ ಹೇಳುವ ಸಲುವಾಗಿ ರಾಹುಲ್ ಪಂಜಾಬ್ ನಾದ್ಯಂತ ಪಾದಯಾತ್ರೆ ಕೈ ಗೊಂಡಿದ್ದರು. ಇದೀಗ ತೆಲಂಗಾಣದ ರೈತರಿಗೆ ಸಾಂತ್ವನ ಹೇಳುವ ಸಲುವಾಗಿ 2 ದಿನಗಳ ಕಾಲ ರಾಹುಲ್ ತೆಲಂಗಾಣಕ್ಕೆ ಭೇಟಿ ನೀಡಿಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com