
ನವದೆಹಲಿ: ನೂತನ ಕೇಂದ್ರ ಜಾಗೃತ ಆಯುಕ್ತ(ಸಿವಿಸಿ) ಹಾಗೂ ಜಾಗೃತ ಆಯುಕ್ತರ ಹುದ್ದೆ ತುಂಬಿಸಿಕೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈ ಮೂಲಕ ನೇಮಕ ಪ್ರಕ್ರಿಯೆ ಮುಂದುವರಿ ಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಸಿವಿಸಿ ಹಾಗೂ ಜಾಗೃತ ಆಯುಕ್ತರ ಹುದ್ದೆ ಕಳೆದ ಕೆಲ ತಿಂಗಳಿನಿಂದ ಖಾಲಿಯಿರುವು ದರಿಂದ ಅದನ್ನು ಭರ್ತಿ ಮಾಡುವುದು ಅವಶ್ಯ. ಆದ್ದರಿಂದ ನೇಮಕ ಪ್ರಕ್ರಿಯೆ ನಡೆಸಲು ಅನುಮತಿ ನೀಡಲಾಗಿದೆ ಎಂದು ಕೋರ್ಟ್ ತಿಳಿಸಿದೆ. ಸಿವಿಸಿ ಹಾಗೂ ಜಾಗೃತ ಆಯುಕ್ತರ ಹುದ್ದೆಗೆ ಬಂದಿದ್ದ 130 ಅರ್ಜಿಗಳನ್ನು ಪರಿಶೀಲಿಸಿದ ಸರ್ಕಾರ 10 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಈ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಅನುಮತಿ ಬೇಕು ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಸೋಮವಾರ ಮನವಿ ಮಾಡಿದ್ದರು.
Advertisement