ಮಾನಸ ಸರೋವರ ಯಾತ್ರೆಗೆ ಜೂನ್ ನಲ್ಲಿ ಪರ್ಯಾಯ ಮಾರ್ಗ : ಪ್ರಧಾನಿ ಮೋದಿ

ಮಾನಸ ಸರೋವರ ಯಾತ್ರೆಗೆ ಸಿಕ್ಕಿಂನ ನಾಥುಲಾ ಮೂಲಕ ಸಂಪರ್ಕ ಕಲ್ಪಿಸುವ ಎರಡನೇ ಮಾರ್ಗ ಮುಂದಿನ ತಿಂಗಳಿಂದ ಯಾತ್ರಿಕರ ಸಂಚಾರಕ್ಕೆ ಮುಕ್ತವಾಗಲಿದೆ
ಮಾನಸ ಸರೋವರ ಯಾತ್ರೆಗೆ  ಪರ್ಯಾಯ ಮಾರ್ಗ
ಮಾನಸ ಸರೋವರ ಯಾತ್ರೆಗೆ ಪರ್ಯಾಯ ಮಾರ್ಗ

ಬೀಜಿಂಗ್: ಮಾನಸ ಸರೋವರ ಯಾತ್ರೆಗೆ ಸಿಕ್ಕಿಂನ ನಾಥುಲಾ ಮೂಲಕ ಸಂಪರ್ಕ ಕಲ್ಪಿಸುವ ಎರಡನೇ ಮಾರ್ಗ ಮುಂದಿನ ತಿಂಗಳಿಂದ ಯಾತ್ರಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಥಮ ಬಾರಿ ಚೀನಾ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿ, ಮಾನಸ ಸರೋವರ ಯಾತ್ರೆಗೆ  ನಾಥುಲಾ ಮೂಲಕ ಸಂಪರ್ಕ ಕಲ್ಪಿಸಿದ್ದಕ್ಕೆ ಚೀನಾಗೆ ಧನ್ಯವಾದ ತಿಳಿಸಿದ್ದಾರೆ. 

ಉತ್ತರಾಖಂಡದ ಲಿಪ್‌ ಲೇಖ್ ಮಾರ್ಗದ  ಮೂಲಕವೇ ಪ್ರಸ್ತುತ ಮಾನಸ ಸರೋವರ ಯಾತ್ರೆಗೆ ತೆರಬೇಕಿತ್ತು, 2013ರಲ್ಲಿ ಉಂಟಾದ ಜಲಪ್ರಳಯದ ಪರಿಣಾಮ ಯಾತ್ರೆಗೆ ಇದ್ದ ಏಕೈಕ ಮಾರ್ಗ ಹಾನಿಗೊಳಗಾಗಿತ್ತು. ಹಾಗಾಗಿ ವಯೋವೃದ್ಧರು ಈ ಹಾದಿಯಲ್ಲಿ ಸಾಗಲು ಸಾಕಷ್ಟು ಪ್ರಯಾಸ ಪಡಬೇಕಿತ್ತು ಆದರೆ ಇನ್ನು ಮುಂದೆ ನಾಥುಲಾ ಮೂಲಕ ಪರ್ಯಾಯ ಮಾರ್ಗದ ಮೂಲಕ ಆರಾಮದಾಯಕ ಪ್ರಯಾಣ ಮಾಡಬಹುದಾಗಿದೆ.

ಕಳೆದ ವರ್ಷ ಚೀನಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದಾಗ, ಸಿಕ್ಕಿಂ ಮೂಲಕ ಮಾನಸ ಸರೋವರ ಯಾತ್ರೆ ಮಾರ್ಗ ತೆರೆಯುವ ಸಂಬಂಧ ಉಭಯ ದೇಶಗಳೂ ಒಪ್ಪಂದಕ್ಕೆ ಸಹಿದ್ದವು. ಒಪ್ಪಂದದಿಂದ ನಾಥುಲಾ ಮಾರ್ಗದ ಜೊತೆಗೆ ಉತ್ತರಾಖಂಡ್ ನ ಲಿಪುಲೇಖ್ ಪಾಸ್ ಮಾರ್ಗವೂ ಬಳಕೆಯಲ್ಲಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com