
ನವದೆಹಲಿ: 2014ರ ಲೋಕಸಭಾ ಚುನಾವಣೆಯ ದಾಖಲೆ ಮಟ್ಟದ ಗೆಲುವು ಕುರಿತಂತೆ ತಮ್ಮ ನೆನಪುಗಳನ್ನು ನೆನೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತಂತೆ ಟ್ವಿಟರ್ ಮೂಲಕ ಸಂತಸ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನನ್ನ ಮೇಲಿನ ಪ್ರೀತಿ ಹಾಗೂ ಗೌರವದಿಂದ ಮತ ನೀಡಿದ ಎಲ್ಲಾ ನನ್ನ ಆತ್ಮೀಯರಿಗೂ ಭಾರತದ ಎಲ್ಲಾ ನನ್ನ ಅಕ್ಕ, ತಂಗಿಯರು ಹಾಗೂ ಅಣ್ಣ, ತಮ್ಮಂದಿರಿಗೂ ಅಭಿನಂದನೆಗಳು.
Advertisement