ಭಾರತ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ: ನರೇಂದ್ರ ಮೋದಿ

ಮಂಗೋಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ಮಂಗೋಲಿಯಾ ಸಂಸತ್  ನಲ್ಲಿ ಮೋದಿ ಭಾಷಣ(ಚಿತ್ರ ಕೃಪೆ: twitter.com/PMOIndia/media)
ಮಂಗೋಲಿಯಾ ಸಂಸತ್ ನಲ್ಲಿ ಮೋದಿ ಭಾಷಣ(ಚಿತ್ರ ಕೃಪೆ: twitter.com/PMOIndia/media)

ಉಲಾನ್ ಬಟರ್ : ಮಂಗೋಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಮೂಲಕ ಮಂಗೋಲಿಯಾ ಸಂಸತ್  ಉದ್ದೇಶಿಸಿ ಭಾಷಣ ಮಾತನಾಡಿದ ಪ್ರಥಮ ವಿದೇಶಿ ನಾಯಕ ಹಾಗೂ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತ-ಮಂಗೋಲಿಯಾದ ಆರ್ಥಿಕ ಸಂಬಂಧ ಹೊಸತಾಗಿದ್ದರೂ, ಸಾಂಸ್ಕೃತಿಕ ಸಂಬಂಧ ಹಳೆಯದಾಗಿದೆ. ಐದು ದಶಕಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಪಡೆಯಲು ನಾವು ನಿಮಗೆ ಬೆಂಬಲ ನೀಡಿದ್ದೆವು ಅಂದಿನಿಂದ ಇಂದಿನವರೆಗೂ ಜಾಗತಿಕ ಮಟ್ಟದಲ್ಲಿ ಮಂಗೋಲಿಯಾ ಭಾರತಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಿದೆ ಇದಕ್ಕಾಗಿ ಮಂಗೋಲಿಯಾ ಸರ್ಕಾರಕ್ಕೆ ಧನ್ಯವಾದ ತಿಳಿಸುವೆ ಎಂದು ಪ್ರಧಾನಿ ಹೇಳಿದ್ದಾರೆ.

ಭಾರತ, ಜಾಗತಿಕ ಮಟ್ಟದಲ್ಲಿ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ  ರಾಷ್ಟ್ರವಾಗಿದ್ದು ಮಂಗೋಲಿಯಾ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಮೋದಿ ಘೋಷಿಸಿದ್ದಾರೆ. ಭಾರತ ಹಾಗೂ ಮಂಗೋಲಿಯಾ ನಡುವೆ 60 ವರ್ಷಗಳ ಸುದೀರ್ಘ ರಾಜತಾಂತ್ರಿಕ ಸಂಬಂಧ ಇದೆ. ಮಂಗೋಲಿಯಾದಲ್ಲಿ ಪ್ರಜಾಪ್ರಭುತ್ವ ಅಸ್ಥಿತ್ವಕ್ಕೆ ಬಂದು 25 ವರ್ಷ ಕಳೆದಿರುವ ಸಂಭ್ರಮಾಚರಣೆಯಲ್ಲಿ ಸಂಸತ್ ನ್ನು ಉದ್ದೇಶಿಸಿ ಮಾತನಾಡುತ್ತಿರುವುದು ನನ್ನ ಸೌಭಾಗ್ಯ ಎಂದಿರುವ ಮೋದಿ ಮಂಗೋಲಿಯಾದಲ್ಲಿ ಜನಪ್ರಿಯವಾಗಿರುವ 'ಯೋಗ' ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನ ಬೆಳವಣಿಗೆಯಲ್ಲಿ ಭಾರತದ ಪಾತ್ರ ಹೇಗಿದೆಯೋ ಹಾಗೆಯೇ ಭಾರತದ ಅಭಿವೃದ್ಧಿಯಲ್ಲಿ ಮಂಗೋಲಿಯಾ ಪಾತ್ರವವೂ ಇದೆ. ಮಂಗೋಲಿಯಾ ಯಾವುದೇ ರೀತಿಯ ನೆರವು ಕೇಳಿದರೂ ನೀಡಲು ಭಾರತ ಸಿದ್ಧವಿದೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಭಾರತ ಮಂಗೋಲಿಯಾದೊಂದಿಗೆ ಕೈಜೋಡಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಉಭಯ ದೇಶಗಳ ನಡುವೆ ಆಂತರಿಕ ಭದ್ರತೆ, ವಿಮಾ ಕ್ಷೇತ್ರಗಳಲ್ಲಿ ಏರ್ಪಟ್ಟಿರುವ ಒಪ್ಪಂದಗಳನ್ನು  ದ್ವಿಪಕ್ಷೀಯ ಸಂಬಂಧದ ಹೊಸ ಮೈಲಿಗಲ್ಲು ಎಂದು ಮೋದಿ ಬಣ್ಣಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com