ದೆಹಲಿಯಲ್ಲಿ ಈ ವರ್ಷ 2100 ಮಕ್ಕಳು ನಾಪತ್ತೆ

15,ಏಪ್ರಿಲ್ 2015ರ ವರೆಗೆ ದೆಹಲಿಯಲ್ಲಿ 2,100 ಮಕ್ಕಳು ಕಣ್ಮರೆಯಾಗಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 15, ಏಪ್ರಿಲ್ 2015ರ ವರೆಗೆ ದೆಹಲಿಯಲ್ಲಿ 2,100 ಮಕ್ಕಳು ಕಣ್ಮರೆಯಾಗಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.  ರಾಷ್ಟ್ರ ರಾಜಧಾನಿ ದೆಹಲಿಯಿಂದ ಪ್ರತಿದಿನ ಸುಮಾರು 20 ಮಕ್ಕಳು ನಾಪತ್ತೆಯಾಗುತ್ತಿರುವುದು ವರದಿಯಾಗುತ್ತಿದೆ.
ಹೀಗೆ ನಾಪತ್ತೆಯಾದವರಲ್ಲಿ ಅರ್ಧದಷ್ಟು ಮಕ್ಕಳನ್ನು ಮಾತ್ರ ವಾಪಸ್ ಕರೆತರುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಉಳಿದಂತೆ ಕಾಣೆಯಾದ ಹೆಣ್ಣುಮಕ್ಕಳನ್ನು ರಕ್ಷಿಸುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ.  ಹೆಣ್ಣುಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಿರಬಹುದೆಂದು ಶಂಕಿಸಲಾಗಿದೆ.
ದೆಹಲಿ ಪೊಲೀಸರ ಅಂಕಿ ಅಂಶದ ಪ್ರಕಾರ ಪ್ರಸಕ್ತ ವರ್ಷ 2. 168 ಮಕ್ಕಳು ನಾಪತ್ತೆಯಾಗಿದ್ದರು.  ಅದರಲ್ಲಿ 1,212 ಹೆಣ್ಣುಮಕ್ಕಳು, 956 ಗಂಡು ಮಕ್ಕಳು ಕಣ್ಮರೆಯಾಗಿದ್ದರು. ಇವರಲ್ಲಿ ಇದುವರೆಗೆ 1,202 ಮಕ್ಕಳನ್ನು ರಕ್ಷಿಸಲಾಗಿದೆ.
ಓದಿನ ಬಗೆಗಿನ ಭಯ, ಮನೆಯಲ್ಲಿನ ಒತ್ತಡ, ಕೌಟುಂಬಿಕ ಕಲಹ, ಗುಟ್ಟಾಗಿ ಓಡಿಹೋಗುವುದು, ಪೋಷಕರು ಬೈಯ್ದರೆ ಮನೆ ಬಿಟ್ಟು ಹೋಗುವುದು ಇದೆಲ್ಲಾ ಕಾರಣಗಳಿಂದಾಗಿ ಪ್ರತಿ ವರ್ಷ ಮಕ್ಕಳು ನಾಪತ್ತೆಯಾಗುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ದೆಹಲಿ ಪೊಲೀಸರು ಹಲವು ಎನ್ ಜಿಎಓ ಗಳ ಸಹಯೋಗದಲ್ಲಿ ಜಾಗ್ರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಪತ್ತೆಯಾದ ಮಕ್ಕಳನ್ನು ಹುಡುಕಲು ಆಪರೇಷನ್ ಮಿಷನ್ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಮನೆ ಬಿಟ್ಟ ಮಕ್ಕಳನ್ನು ವಾಪಸ್ ಪೋಷಕರ ಬಳಿಗೆ ಸೇರಿಸಲು ಈ ಯೋಜನೆ ಸಹಾಯ ವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com