
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ಮುಸುಕಿನ ಗುದ್ದಾಟ ಈಗ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ವರೆಗೂ ತಲುಪಿದೆ.
ಮುಖ್ಯ ಕಾರ್ಯದರ್ಶಿ ನೇಮಕ ವಿಚಾರವಾಗಿ ಏರ್ಪಟ್ಟಿರುವ ಒಳಜಗಳ ಬೀದಿಗೆ ಬಂದಿದ್ದು, ಸಮಸ್ಯೆಗೆ ಇತಿಶ್ರೀ ಹಾಡಲು ಅರವಿಂದ್ ಕೇಜ್ರಿವಾಲ್ ನಾಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಲಿದ್ದಾರೆ.
ಮಂಗಳ ವಾರ ಸಂಜೆ 6 ಗಂಟೆಗೆ ರೈಸಿನಾ ಹಿಲ್ ನಲ್ಲಿ ರಾಷ್ಟ್ರಪತಿ ಅವರನ್ನು ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಲಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ನಜೀಬ್ ಜಂಗ್ ಹಿರಿಯ ಅಧಿಕಾರಿ ಶಕುಂತಲಾ ಗ್ಯಾಮ್ಲಿನ್ ಅವರನ್ನು ನೇಮಕ ಮಾಡಿದ್ದರು. ಹೀಗಾಗಿ ಶಕುಂತಲಾ ಗ್ಯಾಮ್ಲಿನ್ ಚಾರ್ಜ್ ತೆಗೆದುಕೊಳ್ಳಲು ಹೋದಾಗ, ಅವರನ್ನು ವಾಪಸ್ ಕಳುಹಿಸಿದ್ದಾರೆ. ಈ ಕುರಿತು ಲೆಪ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.
Advertisement