

ರಾಂಚಿ: ಜಾರ್ಖಾಂಡ್ ನ ಮೊದಲ ಮಹಿಳಾ ಗವರ್ನರ್ ಆಗಿ ದ್ರೌಪದಿ ಮುರ್ಮು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಜಾರ್ಖಾಂಡ್ ಹೈ ಕೋರ್ಟ್ ಮುಖ್ಯಸ್ಥ ನ್ಯಾಯಾಧೀಶ ವೀರೇಂದ್ರ ಸಿಂಗ್ ಅವರು ದ್ರೌಪದಿ ಮುರ್ಮು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನವೀನ್ ಪಟ್ನಾಯಕ್ ಕ್ಯಾಬಿನೆಟ್ ನಲ್ಲಿ ಸಚಿವರಾಗಿದ್ದ ದ್ರೌಪದಿ ಮುರ್ಮು ಅವರು, ಒಡಿಶಾದಲ್ಲಿ ಬಿಜೆಪಿ ಶಾಸಕರಾಗಿ 2 ಬಾರಿ ಆಯ್ಕೆಯಾಗಿದ್ದರು.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಜಾರ್ಖಾಂಡ್ ಮುಖ್ಯಮಂತ್ರಿ ರಘುಬಾರ್ ದಾಸ್ ಹಾಗೂ ಕ್ಯಾಬಿನೆಟ್ ಸಹೋದ್ಯೋಗಿಗಳು, ಜಾರ್ಖಾಂಡ್ ಮಾಜಿ ಮುಖ್ಯಮಂತ್ರಿಗಳಾದ ಶಿಬು ಸೊರೆನ್ ಮತ್ತು ಅರ್ಜುನ್ ಮುಂಡಾ, ಕೇಂದ್ರ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಸುದರ್ಶನ್ ಭಗತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.