ಪಕ್ಕದ ಮನೆಯಲ್ಲಿ ಊಟ ಮಾಡಿದ್ದಕ್ಕೆ ಬಾಲಕನನ್ನು ಹೊಡೆದು ಸಾಯಿಸಿದ!

ಪಕ್ಕದ ಮನೆಯಲ್ಲಿ ಊಟ ಮಾಡಿದ್ದಕ್ಕಾಗಿ ಬಾಲಕನೊಬ್ಬನ್ನು ಹೊಡೆದು ಸಾಯಿಸಿದ ಪ್ರಕರಣ ಇಲ್ಲಿನ ಗಿರಿರಾಜ್ ವಾಟಿಕಾ ಕಾಲನಿಯಲ್ಲಿ...
ಬಾಲಕನಿಗೆ ಥಳಿತ (ಸಾಂದರ್ಭಿಕ ಚಿತ್ರ)
ಬಾಲಕನಿಗೆ ಥಳಿತ (ಸಾಂದರ್ಭಿಕ ಚಿತ್ರ)
Updated on

ಮಥುರಾ: ಪಕ್ಕದ ಮನೆಯಲ್ಲಿ ಊಟ ಮಾಡಿದ್ದಕ್ಕಾಗಿ ಬಾಲಕನೊಬ್ಬನ್ನು ಹೊಡೆದು ಸಾಯಿಸಿದ ಪ್ರಕರಣ ಇಲ್ಲಿನ ಗಿರಿರಾಜ್ ವಾಟಿಕಾ ಕಾಲನಿಯಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ಧರ್ಮೇಂದ್ರ ಎಂಬ ಹುಡುಗ ನೆರೆಮನೆಯಿಂದ ಊಟ ಮಾಡಿದ್ದ. ಇದಕ್ಕೆ ರೊಚ್ಚಿಗೆದ್ದ ಧರ್ಮೇಂದ್ರನ ತಾಯಿ ಮೀನಾಕ್ಷಿಯವರ ಲಿವಿಂಗ್ ಇನ್ ಸಂಗಾತಿ ರಾಜೇಂದ್ರ ಧರ್ಮೇಂದ್ರನನ್ನು ಭಾನುವಾರ ಹೊಡೆದು ಸಾಯಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಕೇಶ್ ಸಿಂಗ್ ಹೇಳಿದ್ದಾರೆ.

ಆಹಾರ ಸಿಗದೇ ಇದ್ದ ಕಾರಣ, ಬಾಲಕ ಧರ್ಮೇಂದ್ರ ಪಕ್ಕದ ಮನೆಯಲ್ಲಿ ಊಟ ಮಾಡಿದ್ದ. ವಿಷಯ ತಿಳಿದ ರಾಜೇಂದ್ರ ಬಾಲಕನಿಗೆ ರಾತ್ರಿ ಚೆನ್ನಾಗಿ ಥಳಿಸಿದ್ದಾನೆ. ಬೆಳಗ್ಗೆದ್ದಾಗ ಬಾಲಕ ಮೃತ ಪಟ್ಟಿರುವುದು ತಿಳಿದು ಬಂತು. ಇದು ತಿಳಿಯುತ್ತಿದ್ದಂತೆ ರಾಜೇಂದ್ರ ತಲೆಮರೆಸಿಕೊಂಡಿದ್ದಾನೆ.

ಧರ್ಮೇಂದ್ರನ ಅಮ್ಮ ಮೀನಾಕ್ಷಿ ಟ್ರಕ್ ಡ್ರೈವರ್ ರಾಜೇಂದ್ರ ಜತೆಗೆ ಲಿವಿಂಗ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ.  ಮೀನಾಕ್ಷಿ ತನ್ನಿಬ್ಬರು ಮಕ್ಕಳು ಧರ್ಮೇಂದ್ರ ಮತ್ತು ಜಿತೇಂದ್ರ (12) ಜತೆ ರಾಜೇಂದ್ರನೊಂದಿಗೆ ಸಂಸಾರ ಮಾಡುತ್ತಿದ್ದಾರೆ.

ಮೀನಾಕ್ಷಿ ಶನಿವಾರ ತನ್ನಿಬ್ಬರು ಮಕ್ಕಳನ್ನು ರಾಜೇಂದ್ರನ ಬಳಿ ಬಿಟ್ಟು ಮಧ್ಯಪ್ರದೇಶದ ತಿಕಾಂಗಢ್‌ನಲ್ಲಿರುವ ತವರು ಮನೆಗೆ ಹೋಗಿದ್ದಳು.

ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ರಾಜೇಂದ್ರನಿಗಾಗಿ ಹುಡುಕಾಟ ಮುಂದುವರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com