ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡಿದ ಚಿನ್ನದ ಮೇಲಿನ ಬಡ್ಡಿದರಕ್ಕೆ ತೆರಿಗೆ ವಿನಾಯ್ತಿ !
ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡಿದ ಚಿನ್ನದ ಮೇಲಿನ ಬಡ್ಡಿದರಕ್ಕೆ ತೆರಿಗೆ ವಿನಾಯ್ತಿ !

ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡಿದ ಚಿನ್ನದ ಮೇಲಿನ ಬಡ್ಡಿದರಕ್ಕೆ ತೆರಿಗೆ ವಿನಾಯ್ತಿ !

ಬ್ಯಾಂಕಿನಲ್ಲಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಇಡುವ ಚಿನ್ನದ ಮೇಲೆ ನೀಡಲಾಗುವ ಬಡ್ಡಿಗೆ ತೆರಿಗೆ ವಿನಾಯ್ತಿ ನೀಡುವ ಸಂಬಂಧ ಸರ್ಕಾರ ಮಾದರಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ...

ನವದೆಹಲಿ: ಬ್ಯಾಂಕಿನಲ್ಲಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಇಡುವ ಚಿನ್ನದ ಮೇಲೆ ನೀಡಲಾಗುವ ಬಡ್ಡಿಗೆ ತೆರಿಗೆ ವಿನಾಯ್ತಿ ನೀಡುವ ಸಂಬಂಧ ಸರ್ಕಾರ ಮಾದರಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಈ ಮಾರ್ಗಸೂಚಿ ಪ್ರಕಾರ, ಕನಿಷ್ಠ 30 ಗ್ರಾಂ ಚಿನ್ನವನ್ನು ಬ್ಯಾಂಕಿನಲ್ಲಿ ಇಡಬೇಕು. ಇದಕ್ಕೆ ಸಿಗುವ ಬಡ್ಡಿಯ ಮೇಲೆ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲಾಗುವುದು. ವ್ಯಕ್ತಿಗಳು ಅಥವಾ ಸಂಸ್ಥೆಗಳ ಬಳಿ ಇರುವ ಚಿನ್ನವನ್ನು ಬಿಐಎಸ್ ಪ್ರಮಾಣೀಕೃತ ಹಾಲ್ ಮಾರ್ಕಿಂಗ್ ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಬಡ್ಡಿಪಡೆಯ ಬೇಕಾದರೆ ಬ್ಯಾಂಕ್‍ಗಳಲ್ಲಿ ಗೋಲ್ಡ್ ಉಳಿತಾಯ ಖಾತೆಗಳನ್ನು ಕನಿಷ್ಠ ಒಂದು ವರ್ಷದ ವರೆಗಾದರೂ ನಿರ್ವಹಿಸಬೇಕಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಚಿನ್ನವನ್ನು ಹಣದ ರೂಪಕ್ಕೆ ಪರಿವರ್ತಿಸುವ ಈ ಮಾರ್ಗಸೂಚಿಗೆ ಹಣಕಾಸು ಸಚಿವಾಲಯ ಸಂಬಂಧಪಟ್ಟವರಿಂದ ಜೂ.2ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಳಿದೆ. ಬಜೆಟ್‍ನಲ್ಲೇ ಘೋಷಿಸಲಾಗಿರುವ ಈ ಯೋಜನೆಯನ್ನು ಆರಂಭದಲ್ಲಿ ಆಯ್ದ ನಗರಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. ಯೋಜನೆಯಲ್ಲಿ ಡಿಪಾಸಿಟ್ ಮಾಡಿದ ಚಿನ್ನದ ಮೇಲೆ ಜ್ಯುವೆಲ್ಲರ್ ಗಳು ಸಾಲವನ್ನೂ ಪಡೆಯಬಹುದು. ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ಬಳಕೆ ಮಾಡುವ ರಾಷ್ಟ್ರ ಭಾರತವಾಗಿದೆ. ಪ್ರತಿ ವರ್ಷ ಭಾರತ 800ರಿಂದ 1 ಸಾವಿರ ಟನ್‍ನಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಹಣದ ರೂಪಕ್ಕೆ ಪರಿವರ್ತನೆಯಾಗದ ಅಂದರೆ ಮನೆ, ದೇವಸ್ಥಾನಗಳಲ್ಲಿರುವ ಚಿನ್ನದ ಪ್ರಮಾಣವೇ ಒಟ್ಟಾರೆ 20 ಸಾವಿರ ಟನ್. ಈ ಯೋಜನೆ ಮೂಲಕ ಸರ್ಕಾರ ಮನೆಯಲ್ಲಿ ಹಾಗೂ ಸಂಸ್ಥೆಗಳ ಬಳಿ ಇರುವ ಚಿನ್ನ ಲೆಕ್ಕಕ್ಕೆ ಸಿಗುವಂತೆ ಮಾಡುವುದು. ಹಾಗೂ ಚಿನ್ನದ ಆಮದನ್ನು ಕಡಿಮೆ ಮಾಡುವುದೇ ಆಗಿದೆ.

Related Stories

No stories found.

Advertisement

X
Kannada Prabha
www.kannadaprabha.com