ಬಿಸಿಲಿನಿಂದ ರಕ್ಷಣೆ ಪಡೆಯುತ್ತಿರುವ ವಾಹನ ಸವಾರರು
ದೇಶ
ತೆಲಂಗಾಣದಲ್ಲಿ ಏರಿದ ಬಿಸಿಲಿನ ತಾಪ : ಎರಡು ದಿನದಲ್ಲಿ 30 ಮಂದಿ ಸಾವು
ತೆಲಂಗಾಣದಲ್ಲಿ ಏರುತ್ತಿರುವ ಬಿಸಿಲ ತಾಪಕ್ಕೆಒಂದೇ ದಿನದಲ್ಲಿ 12 ಮಂದಿ ಮೃತಪಟ್ಟಿರುವ ವರದಿಯಾಗಿದೆ.
ಹೈದರಾಬಾದ್: ತೆಲಂಗಾಣದಲ್ಲಿ ಏರುತ್ತಿರುವ ಬಿಸಿಲ ತಾಪಕ್ಕೆಒಂದೇ ದಿನದಲ್ಲಿ 12 ಮಂದಿ ಮೃತಪಟ್ಟಿರುವ ವರದಿಯಾಗಿದೆ. ಅತ್ಯಧಿಕ ಬಿಸಿಲಿನ ತಾಪಕ್ಕೆ ಎರಡು ದಿನದಲ್ಲಿ 30 ಮಂದಿ ಬಲಿಯಾಗಿದ್ದಾರೆ.
ಕಳೆದ ಎರಡು ದಿನಗಳಿಂದ ತಾಪಮಾನದಲ್ಲಿ ಏರಿಕೆಯಾಗಿ ಗರಿಷ್ಠ 42 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ನಿಜಾಮಾಬಾದ್, ನಳಗೊಂಡ, ರಾಮಗುಂಡೆಮ್, ಅದಿಲಾಬಾದ್ ಜಿಲ್ಲೆಗಳಲ್ಲಿ ತಾಪಾಮಾನ ಏರಿಕೆಗೆ ದಿನಗೂಲಿ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು ತತ್ತರಿಸಿಹೋಗಿದ್ದಾರೆ.
ಹೆದ್ರಾಬಾದ್ ನ ಮೆಹಬೂಬ್ ನಗರದಲ್ಲಿ ಗರಿಷ್ಠ 46 ಡಿಗ್ರಿ ಉಷ್ಠಾಂಶ ದಾಖಲಾಗಿದೆ. ಅತ್ಯಧಿಕ ಬಿಸಿಲಿನಿಂದ ಖಮ್ಮಾಮ್ ಮತ್ತು ವಾರಾಂಗಲ್ ಜಿಲ್ಲೆಗಳಲ್ಲಿ ಕಳೆದ ಎರಡು ದಿನದಲ್ಲಿ 30 ಮಂದಿ ಸಾವನ್ನಪ್ಪಿರುವುದನ್ನು ಅನಧಿಕೃತ ಮೂಲಗಳು ತಿಳಿಸಿವೆ.
ಮುಂದಿನ ಮೂರು ದಿನಗಳು ಇದೇ ರೀತಿಯ ತಾಪಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ