ಅಧಿಕಾರಿಗಳ ನೇಮಕ ಅಧಿಕಾರ ಗವರ್ನರ್ ಗೆ ಇದೆ: ಜಂಗ್ ಬೆಂಬಲಕ್ಕೆ ನಿಂತ ಕೇಂದ್ರ

ಅಧಿಕಾರಿ ನೇಮಕ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್ ಜಂಗ್ ನಡುವಿನ ವಿವಾದಕ್ಕೆ ಕೇಂದ್ರ...
ನಜೀಬ್ ಜಂಗ್ - ಅರವಿಂದ್ ಕೇಜ್ರಿವಾಲ್
ನಜೀಬ್ ಜಂಗ್ - ಅರವಿಂದ್ ಕೇಜ್ರಿವಾಲ್

ನವದೆಹಲಿ: ಅಧಿಕಾರಿ ನೇಮಕ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್ ಜಂಗ್ ನಡುವಿನ ವಿವಾದಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕ ತೆರೆ ಎಳೆದಿದ್ದು, ಉನ್ನತ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ಲೆಫ್ಟಿನೆಂಟ್‌ ಗವರ್ನರ್‌ಗೆ ಇದೆ ಎಂದು ಸ್ಪಷ್ಟಪಡಿಸಿದೆ.

ಈ ಸಂಬಂಧ ಕೇಂದ್ರ ಗೃಹ ಇಲಾಖೆ ವಿಶೇಷ ಅಧಿಸೂಚನೆ ಹೊರಡಿಸಿದ್ದು, ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆಯುವುದು ಕಡ್ಡಾಯವಲ್ಲ ಎಂದು ಹೇಳಿದೆ.

ಸಾರ್ವಜನಿಕ ಆದೇಶ, ಪೊಲೀಸ್, ಭೂಮಿ ಮತ್ತು ಸೇವೆಗಳು ರಾಷ್ಟ್ರರಾಜಧಾನಿ ದೆಹಲಿ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಈ ವಿಷಯಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಅಗತ್ಯಬಿದ್ದರೆ ಸಿಎಂ ಜತೆ ಚರ್ಚಿಸಬಬಹುದು ಎಂದು ಹೇಳಿದೆ.

ಗುರುವಾರ ಸಂಜೆ ಈ ಬಗ್ಗೆ ಪ್ರಧಾನ ಮಂತ್ರಿ ಮತ್ತು ಗೃಹ ಇಲಾಖೆ ಎರಡು ಭಾರಿ ಮಾತುಕತೆ ನಡೆಸಿದ ಬಳಿಕ ಈ ಅಧಿಸೂಚನೆಗೆ ಸಮ್ಮತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com