ಐಸಿಸ್ ಪಾಲಾದ ಪಲ್ಮೆರಾ ನಗರ

ಐಸಿಸ್ ಉಗ್ರರ ಅಟ್ಟಹಾಸಕ್ಕೆ ಸಿರಿಯಾದ ಇನ್ನೊಂದು ಪುರಾತನ ನಗರ ಆಪೋಶನವಾಗಿದೆ. ಪಾರಂಪರಿಕ ಅದ್ಭುತ ಗಳಲ್ಲೊಂದಾಗಿರುವ ಪಲ್ಮೆರಾ ನಗರದ ಮೇಲೆ ದಾಳಿ ಮಾಡಿ ಐಸಿಸ್ ತನ್ನ ಕೈವಶ ಮಾಡಿಕೊಂಡಿದೆ.
ಐಸಿಸ್ ಪಾಲಾದ ಪಲ್ಮೆರಾ ನಗರ
ಐಸಿಸ್ ಪಾಲಾದ ಪಲ್ಮೆರಾ ನಗರ

ಲಂಡನ್: ಐಸಿಸ್ ಉಗ್ರರ ಅಟ್ಟಹಾಸಕ್ಕೆ ಸಿರಿಯಾದ ಇನ್ನೊಂದು ಪುರಾತನ ನಗರ ಆಪೋಶನವಾಗಿದೆ. ಪಾರಂಪರಿಕ ಅದ್ಭುತ ಗಳಲ್ಲೊಂದಾಗಿರುವ ಪಲ್ಮೆರಾ ನಗರದ ಮೇಲೆ ದಾಳಿ ಮಾಡಿ ಐಸಿಸ್ ತನ್ನ ಕೈವಶ ಮಾಡಿಕೊಂಡಿದೆ.

ಪಲ್ಮೆರಾ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಲ್ಲೊಂದಾಗಿದೆ. ಐಸಿಸ್ ಪಲ್ಮೆರಾವನ್ನು ಆಕ್ರಮಿಸಿರುವ ಸುದ್ದಿಯನ್ನು ಸಿಎನ್‍ಎನ್‍ನ ಕಾರ್ಯಕಾರಿ ನಿರ್ದೇಶಕ ರಾಮಿ ಅಬ್ದುರ್ ರಹಮಾನ್ ಫೋನ್ ಮೂಲಕ ದೃಢಪಡಿಸಿದ್ದಾರೆ. ಐಸಿಸ್‍ನ ಉಗ್ರರು ಪಾಲ್ಮಿರಾದ ಪ್ರತಿ ಮನೆ ಬಾಗಿಲಿಗೂ ಹೋಗಿ ಆತಂಕ ಮೂಡಿಸುತ್ತಿದ್ದಾರೆ. ಇಡೀ ನಗರದಲ್ಲಿ ಕರ್ಫ್ಯೂ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರತ್ಯಕ್ಷದರ್ಶಿ ವರದಿಗಳು ತಿಳಿಸಿವೆ.

ನಾಶ ಮಾಡುವ ಆತಂಕ
ಐಸಿಸ್ ಪಲ್ಮೆರಾ ನಗರವನ್ನು ಸಂಪೂರ್ಣವಾಗಿ ನಾಶ ಮಾಡಿ, ಪಾರಂಪರಿಕ ನಗರವನ್ನು ಇಲ್ಲದಂತೆಯೇ ಮಾಡಿಬಿಡುತ್ತಾರೆಂಬ ಆತಂಕ ಕಾಡಲಾರಂಭಿಸಿದೆ. ಏಕೆಂದರೆ ಸಿರಿಯಾದ
ನಿಮೃದ್ ನಗರವನ್ನು ವಶಪಡಿಸಿಕೊಂಡ ಐಸಿಸ್ ಅಲ್ಲಿದ್ದ ಎಲ್ಲ ಐತಿಹಾಸಿಕ ವೈಶಿಷ್ಟ್ಯಗಳನ್ನೂ ಹಾಳುಗೆಡವಿತ್ತು. ಈಗಾಗಲೇ ಅವನತಿ ಹೊಂದಿರುವ ಪಾರಂಪರಿಕ ಐತಿಹ್ಯವಾದ ಪಲ್ಮೆರಾ ಐಸಿಸ್ ಕೈಗೆ ಸಿಕ್ಕು ಪೂರ್ತಿಯಾಗಿ ನಾಶವಾಗುವ ಭಯವನ್ನು ಯುನೆಸ್ಕೊ ವ್ಯಕ್ತಪಡಿಸಿದೆ.

ಪಲ್ಮೆರಾ ವೈಶಿಷ್ಟ್ಯ

ಇದನ್ನು ಮರು ಭೂಮಿಯ ಮದುಮಗಳು ಅಂತಲೇ ಕರೆಯಲಾಗುತ್ತದೆ. ಈ ನಗರದಲ್ಲಿ ಲೆಕ್ಕವಿಲ್ಲದಷ್ಟು ಗತವೈಭವದ ಕುರುಹುಗಳಿವೆ. ಪಲ್ಮೆರಾ ಒಂದು ಕಾಲದಲ್ಲಿ ಪರ್ಷಿಯಾ ಭಾರತ ಹಾಗೂ ಚೀನಾ ದೇಶಗಳನ್ನು ರೋಮ್ ಸಾಮ್ರಾಜ್ಯದೊಂದಿಗೆ ಬೆಸೆಯುವ ಮಾರ್ಗವಾಗಿತ್ತು. ಇರಾಕ್ ಹಾಗೂ ಅರಬ್ ಪ್ರಭಾವವಿರುವ ವಾಸ್ತುಶಿಲ್ಪಗಳಿಗೆ ಪಲ್ಮೆರಾ ಪ್ರಖ್ಯಾತ. ಪಲ್ಮೆರಾ ನಾಶವಾದರೆ ಅದು ಸಿರಿಯಾಗೆ ಮಾತ್ರವಲ್ಲ ಜಗತ್ತಿಗಾಗುವ ನಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಈ ನಗರವನ್ನು ವಶಪಡಿಸಿಕೊಳ್ಳುವುದರಿಂದ ಐಸಿಸ್‍ಗೆ ಮತ್ತೊಂದು ಜಾಗ ಕೈವಶ ಮಾಡಿಕೊಂಡಿರುವ ಗರ್ವ ಬಿಟ್ಟರೆ, ಇನ್ಯಾವ ಲಾಭವೂ ಇಲ್ಲ ಎಂದು ಅಲ್ಲಿನ ಭೌಗೋಳಿಕ ಅಧ್ಯಯನಕಾರರು ಅಂದಾಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com