ಕಾಶ್ಮೀರದಲ್ಲಿ ಪಾಕಿಸ್ತಾನ, ಎಲ್ ಇಟಿ ಧ್ವಜ ಹಾರಾಟ: ಕಣಿವೆ ರಾಜ್ಯ ಮತ್ತೆ ಉದ್ವಿಗ್ನ

ಕಣಿವೆ ರಾಜ್ಯ ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಕಿಡಿಗೇಡಿಗಳು ಪಾಕಿಸ್ತಾನ ಮತ್ತು ಲಷ್ಕರ್ ಇ ತಯ್ಬಾ ಭಯೋತ್ಪಾದಕ,,,,,,,,
ಉದ್ವಿಗ್ನ ಶ್ರೀನಗರ
ಉದ್ವಿಗ್ನ ಶ್ರೀನಗರ
Updated on

ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಕಿಡಿಗೇಡಿಗಳು ಪಾಕಿಸ್ತಾನ ಮತ್ತು ಲಷ್ಕರ್ ಇ ತಯ್ಬಾ ಭಯೋತ್ಪಾದಕ ಸಂಘಟನೆಯ ಧ್ವಜಗಳನ್ನು ಹಾಕಿದ್ದರಿಂದ ಕೆಲಕಾಲ ಉದ್ವಿಗ್ನ  ಪರಿಸ್ಥಿತಿ ನಿರ್ಮಾಣವಾಗಿತ್ತು.

ಪರಿಸ್ಥಿತಿ ನಿಯಂತ್ರಿಸಲು ಜಮ್ಮು ಕಾಶ್ಮೀರ ಪೊಲೀಸರು ಅಶ್ರವಾಯು ಸಿಡಿಸಿದರು. ಶುಕ್ರವಾರದ ಪ್ರಾರ್ಥನೆ ನಂತರ ಶ್ರೀನಗರದ ನೌಹಟ್ಟ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಜಾಮಿಯಾ ಮಸೀದಿ ಮುಂದೆ ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಹೀಗಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

 1990 ಮೇ 21 ರಂದು ಹತ್ಯೆಗೀಡಾಗಿದ್ದ ಹುರಿಯತ್ ಕಾನ್ಪ್ ರೆನ್ಸ್ ಅಧ್ಯಕ್ಷ ಮೌಲ್ವಿ ಮಹಮದ್ ಫಾರೂಕ್ ಸಾವಿನ ಸ್ಮರಣಾರ್ಥ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ 2002 ರಲ್ಲಿ  ಮತ್ತೊಂದು ಸಂಘಟನೆ ಮತ್ತೊಬ್ಬ ಹುರಿಯತ್ ಕಾನ್ಪರೆನ್ಸ್ ಮುಖಂಡ ಅಬ್ದುಲ್ ಗನಿ ಲೋನ್ ಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ರ್ಯಾಲಿ ಮಾಡಲು ತಯಾರಿ ನಡೆಸುತ್ತಿತ್ತು. ಈ ವೇಳೆ ಪಾಕಿಸ್ತಾನ ಮತ್ತು ಎಲ್ ಇಟಿ ಧ್ವಜ ಹಾರಾಟದಿಂದ ನಡೆಯುತ್ತಿದ್ದ ಪ್ರತಿಭಟನಾ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತು. ಹೀಗಾಗಿ ಪೊಲೀಸರು ಅಶ್ರುವಾಯು ಸಿಡಿಸಿ ಗುಂಪು ಚದುರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com