ಉತ್ತರ ಭಾರತಕ್ಕೆ ಬಿಸಿ ಗಾಳಿ ಬೀಸುವ ಎಚ್ಚರಿಕೆ

ಉತ್ತರ ಭಾರತ, ಪೂರ್ವ ಭಾರತಗಳಲ್ಲಿ ಎರಡು ದಿನಗಳಿಂದ ಬಿಸಿಲ ಝಳ ಹೆಚ್ಚಾಗಿದೆ. ಈ ಪ್ರದೇಶದ ಹೆಚ್ಚಿನ ಎಲ್ಲ ರಾಜ್ಯಗಳಲ್ಲಿ ಬಿಸಿ ಗಾಳಿ ಬೀಸುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ...
ದೆಹಲಿ
ದೆಹಲಿ

ನವದೆಹಲಿ: ಉತ್ತರ ಭಾರತ, ಪೂರ್ವ ಭಾರತಗಳಲ್ಲಿ ಎರಡು ದಿನಗಳಿಂದ ಬಿಸಿಲ ಝಳ ಹೆಚ್ಚಾಗಿದೆ. ಈ ಪ್ರದೇಶದ ಹೆಚ್ಚಿನ ಎಲ್ಲ ರಾಜ್ಯಗಳಲ್ಲಿ ಬಿಸಿ ಗಾಳಿ ಬೀಸುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 42.6 ಡಿಗ್ರಿ ತಾಪಮಾನ ದಾಖಲಾಗಿದೆ. ಮುಂದಿನ 2-3 ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಸಿನ ಝಳ ಹೆಚ್ಚಿದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಂದೇಶ ರವಾನಿಸಿದೆ. ಗುರುವಾರ ಒಡಿಶಾ ದಲ್ಲಿ ಬಿಸಿಲ ಝಳಕ್ಕೆ 12 ಮಂದಿ ಅಸುನೀಗಿದ್ದರೆ, ತೆಲಂಗಾಣದಲ್ಲಿ 2 ದಿನಗಳಲ್ಲಿ 30 ಮಂದಿ ಸಾವಿಗೀಡಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com